ಸೊರಬ: ಭೀಕರ ಬೈಕ್ ಅಪಘಾತವಾಗಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೊರಬದಲ್ಲಿ ನಡೆದಿದೆ.

ಸೊರಬ ತಾಲೂಕಿನ ಮಳಲಗದ್ದೆ ಬಸ್ ನಿಲ್ದಾಣದ ಬಳಿಯೇ ಈ ದುರ್ಘಟನೆ ನಡೆದಿದ್ದು, ಮೃತ ವ್ಯಕ್ತಿ ಅದೆ ಗ್ರಾಮದ ಅಧ್ಯಕ್ಷ ಕೃಷ್ಣಪ್ಪ ಎಂದು ಎಂದು ಗುರುತಿಸಲಾಗಿದೆ. ಮಳಲಗದ್ದೆ

ಗ್ರಾಮದ ಹಾಲಿನ ಡೈರಿಗೆ ಹಾಲು ಕೊಟ್ಟು ಮುಖ್ಯ ರಸ್ತೆ ಮಾರ್ಗವಾಗಿ ಮನೆ ಕಡೆಗೆ ಬರುತ್ತಿದ್ದರು ಎನ್ನಲಾಗಿದೆ. ರಸ್ತೆ ದಾಟುವಾಗ ಬಲಬದಿಯಿಂದ ಬಂದ

ಕೆ ಎಸ್ ಆರ್ ಟಿ ಸಿ ಬೈಕ್‌ಗೆ ನಡು ರಸ್ತೆಯಲ್ಲಿ ಗುದ್ದಿದ್ದು, ಈ ವೇಳೆ ವ್ಯಕ್ತಿ ತಲೆ ರಸ್ತೆಗೆ ಅಪ್ಪಳಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಸೊರಬ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!