ಶಿವಮೊಗ್ಗ,ಡಿ.೪:
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಈಗಿರುವ ಶಾಖೆಗಳ ಜೊತೆಗೆ ಇನ್ನೂ ಮೂರು ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದ್ದು, ಇದೆ ತಿಂಗಳು ಚಾಲನೆ ನೀಡಲಾಗು ವುದು ಎಂದು ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೨ ಹೊಸ ಶಾಖೆಗಳನ್ನು ತೆರೆಯಲು ಅನುಮತಿ ಕೋರಿದ್ದು, ಈಗ ಮೂರು ಶಾಖೆಗಳಿಗೆ ಆರ್‌ಬಿಐ ಅನುಮತಿ ನೀಡಿದೆ ಎಂದ ಅವರು, ಡಿ.೬ರಂದು ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ೨೯ನೇ ಶಾಖೆಯನ್ನೂ ಡಿ.೧೨ರಂದು ಶಿಕಾರಿಪುರ ತಾಲ್ಲೂಕಿನ

ಸುಣ್ಣದಕೊಪ್ಪದಲ್ಲಿ ೩೦ನೇ ಶಾಖೆಯನ್ನೂ ಹಾಗೂ ಡಿ.೧೮ರಂದು ಭದ್ರಾವತಿ ತಾಲ್ಲೂಕಿನ ಕಲ್ಲಿಹಾಳಿನಲ್ಲಿ ೩೧ನೇ ಶಾಖೆಯನ್ನೂ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು…ಮೊದಲನೇ ಪುಟದಿಂದ
ವಿಧಾನಮಂಡಲದ ಅಧಿವೇಶನದ ಬಳಿಕ ವಿದ್ಯುಕ್ತವಾಗಿ ಈ ಶಾಖೆಗಳನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
೨೦೨೩-೨೪ನೇ ಸಾಲಿನಲ್ಲಿ ಒಟ್ಟು ೧೭.೯೯ ಕೋಟಿ ರೂ.ಲಾಭ ಗಳಿಸಿದ ಬ್ಯಾಂಕ್ ೧೦.೫೮ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ೧೩೮.೯೮ ಕೋಟಿ ಷೇರು ಬಂಡ ವಾಳ ಹೊಂದಿದ್ದಲ್ಲದೆ, ೬೭.೪೬ ಕೋಟಿ ರೂ.ನಿಧಿಗಳನ್ನು ಹೊಂದಿದೆ. ೨೩೩೨.೨೯ ಕೋಟಿ ರೂ.ದುಡಿಯುವ ಬಂಡವಾಳ ಹೊಂದಿದ್ದು, ೧೪೬೨.೭೮ ಕೋಟಿ ರೂ.ಠೇ ವಣಿ ಸಂಗ್ರಹಿಸಲಾಗಿದೆ ಎಂದರು.


ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ೫೦೩೮೩ ರೈತರಿಂದ ೨೨.೬೦ ಕೋಟಿ ರೂ. ವಿಮಾ ಪ್ರೀಮಿಯಂ ಪಾವತಿಯಾಗಿದ್ದು, ಇದರಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಒಂದರಿಂದಲೇ ೨೩೦೯೪ ರೈತರಿಂದ ೧೦.೧೩ ಕೋಟಿ ರೂ. ಜಮಾ ಪಡಿಸಲಾಗಿದೆ ಎಂದ ಅವರು, ಬೆಳೆ ವಿಮೆ ಯೋಜನೆಯಡಿ ೬೨೮ ೮೭ ರೈತರಿಂದ ೨೬.೭೩ ಕೋಟಿ. ರೂ. ವಿಮಾ ಪ್ರೀಮಿಯಂ ಪಾವತಿಯಾಗಿದೆ. ಇದರಲ್ಲಿ ತಮ್ಮ ಬ್ಯಾಂಕಿನ ಮೂಲಕವೇ ೨೪೮೨೨ ರೈತರಿಂದ ೧೦.೮೩ ಕೋಟಿ ರೂ. ಜಮಾ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಬಾರ್ಡ್ ಪುನರ್ಧನ ಸೌಲಭ್ಯ ಕಡಿತಗೊಂಡಿದ್ದಾಗಿಯೂ ೨೦೨೪-೨೫ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ೧೨೦೦೦೦ ರೈತರಿಗೆ ೧೨೦೦ ಕೋಟಿ ರೂ. ಅಲ್ಪವಾವಧಿ ಕೃಷಿ ಬೆಳೆ ಸಾಲದ ಗುರಿಯನ್ನು ಹೊಂದಿದ್ದು, ಪ್ರಸ್ತುತ ೧೦೫೬೪೦ ರೈತರಿಗೆ ೧೧೮೦.೧೨ಕೋಟಿ ಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ.೯೯.೦೭ರಷ್ಟಿರುತ್ತದೆ ಎಂದರು.


ಬೆಳೆ ವಿಮೆ ಮಾಡುವ ಪದ್ಧತಿ ಅವೈವ ಜ್ಞಾನಿಕವಾಗಿದ್ದು, ವಿಮೆ ಮಾಡಿಕೊಳ್ಳುವ ಕಂಪನಿಯವರು ಎಲ್ಲಿದ್ದಾರೆ ಎಂಬುವುದೇ ಇನ್ನೂ ತನಕ ತಿಳಿದಿಲ್ಲ. ಬೆಳೆ ವಿಮೆ ಯೋಜನೆ ಆರಂಭವಾಗಿ ಸುಮಾರು ೨೫ ವರ್ಷಗಳೇ ಕಳೆದರೂ ವಿಮೆ ಕಂಪನಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಶಾಖೆಯನ್ನೇ ತೆರೆದಿಲ್ಲ. ವಿಮೆ ಕುರಿತು, ಯಾರಿಗೆ ಕೇಳಬೇಕು ಎಂಬುವುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇದರಿಂದ ರೈತರು ಇನ್ನಿಲ್ಲದ ಅನ್ಯಾಯವನ್ನು ಅನುಭವಿಸುವಂತಾಗಿದೆ ಎಂದು ವಿಮಾ ಕಂಪನಿಯ ವ್ಯವಹಾರದ ಕುರಿತು ಅಸಮಧಾನ ವ್ಯಕ್ತಪಡಿಸಿದರು.


ಬೆಳೆ ವಿಮೆ ಪದ್ಧತಿ ಇನ್ನೂ ಹಳೆಯ ಸಂಪ್ರದಾಯವನ್ನೇ ಹೊಂದಿದ್ದು, ಇದು ಸಂಪೂರ್ಣ ಪರಿಷ್ಕರಣೆಯಾಗಬೇಕು ಎಂದ ಅವರು, ಬೆಳೆ ವಿಮೆ ಸಮೀಕ್ಷೆಗೆ ಈಗಿರುವ ಗ್ರಾಮಪಂಚಾಯಿತಿ ಘಟಕದ ಬದಲಾಗಿ ಗ್ರಾಮವನ್ನು ಘಟಕವನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ೧೯೩೫೮ ರೈತರಿಗೆ ೪೫ ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆಯಾಗಿದ್ದು, ಈ ಪೈಕಿ ಬ್ಯಾಂಕಿನಿಂದ ೮೮೭೩ ರೈತರಿಗೆ ೧೯.೧೭ ಕೋಟಿ ರೂ. ವಿಮೆ ಪರಿಹಾರವನ್ನು ನೇರವಾಗಿ ಖಾತೆದಾರರ ಉಳಿತಾಯ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದರು.
ನಬಾರ್ಡ್ ರೈತರ ಪರವಾಗಿ ಇರುವ ಉದ್ದೇಶದಿಂದ ಸ್ಥಾಪಿತವಾಗಿದ್ದು, ಈಗ ಆ ಉದ್ದೇಶವನ್ನೇ ಮರೆತಿದೆ ಎಂದು ಆರೋಪಿಸಿದ ಅವರು, ಸಹಕಾರಿ ಸಂಘಗಳ ಮೇಲೆ ನಬಾರ್ಡ್ ವ್ಯವಸ್ಥಿತ ಗದಪ್ರಹಾರ ಮಾಡುತ್ತಿದೆ ಎಂದು ಆಪಾಧಿಸಿದರು.
೨೦೨೪-೨೫ನೇ ಸಾಲಿನಲ್ಲಿ ೧೬೦೦ ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಹಣಕಾಸಿನ ವರ್ಷಾಂತ್ಯಕ್ಕೆ ೨೫ ಕೋಟಿ ರೂ. ನಿವ್ವಳ ಲಾಭಗಳಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಮಹಾಲಿಂಗಶಾಸ್ತ್ರಿ, ಸುಧೀರ್, ದುಗ್ಗಪ್ಪಗೌಡ, ಹನುಮಂತ್ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!