ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಗೆ ಮತ್ತೆ ಮೂವರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 69ಕ್ಕೇರಿಕೆಯಾಗಿದೆ.
ಇಂದು ಮತ್ತೆ 120 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6041ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 257 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 3108 ಸಕ್ರಿಯ ಪ್ರಕರಣಗಳಿದ್ದು, 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
120 ಸೋಂಕಿತರ ಪೈಕಿ 68 ಮಂದಿ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮೂವರು ಅಂತಾರಾಷ್ಟ್ರೀಯ ಪ್ರಯಾಣದಿಂದ ಮರಳಿದ್ದಾರೆ.

ಧಾರವಾಡದ 58 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದರು. ಇವರು ಮಹಾರಾಷ್ಟ್ರದಿಂದ ಆಗಮಿಸಿ ಮೇ23ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರು ನಗರದ 32 ವರ್ಷದ ವ್ಯಕ್ತಿಯನ್ನು ಬುಧವಾರ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು. ನಗರದಲ್ಲಿ ಇನ್ನೋರ್ವ 57 ವರ್ಷದ ವ್ಯಕ್ತಿ ಜ್ವರ, ಕೆಮ್ಮಿನ ಹಿನ್ನೆಲೆಯೊಂದಿಗೆ ಜೂ.8ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ 42, ಯಾದಗಿರಿಯಲ್ಲಿ 27, ವಿಜಯಪುರದಲ್ಲಿ 13, ಕಲಬುರಗಿಯಲ್ಲಿ 11, ಬೀದರ್ ನಲ್ಲಿ 5, ದಕ್ಷಿಣ ಕನ್ನಡ, ದಾರವಾಡದಲ್ಲಿ ತಲಾ 4, ದಾವಣಗೆರೆ, ಹಾಸನ, ಬಳ್ಳಾರಿಯಲ್ಲಿ ತಲಾ 3, ಬಾಗಲಕೋಟೆ, ರಾಮನಗರದಲ್ಲಿ ತಲಾ 2, ಬೆಳಗಾವಿಯಲ್ಲಿ 1 ಪ್ರಕರಣಗಳು ವರದಿಯಾಗಿವೆ.

ಶಿವಮೊಗ್ಗ ಮಾಮೂಲಿ: ಕೊರೊನಾ ಕುರಿತು ರಾಜ್ಯ ಹಾಗೂ ಜಿಲ್ಲಾ ವ್ಯಾಪಿಯ ಮಾಹಿತಿಯು ಈಗಷ್ಟೆ ಹೊರಬಂದಿದೆ. ಶಿವಮೊಗ್ಗದಲ್ಲಿ ಮತ್ತೆ 4 ಪ್ರಕರಣ ನಿನ್ನೆ ಪತ್ತೆಯಾಗಿ ಆತಂಕದ ಸೃಷ್ಟಿಸಿತ್ತು. ಇಂದು ಯಾವುದೇ ಪ್ರಕರಣಗಳಿಲ್ಲ . ಜಿಲ್ಲೆಯ ಸೊಂಕಿತರ ಸಂಖ್ಯೆ ಈಗ 73ಕ್ಕೆ ಏರಿಕೆಯಾಗಿದೆ. ಸೊಂಕಿತರ ಸಂಖ್ಯೆ ಅರ್ಧ ಶತಕ ದಾಟಿ ಮುಂದೆ ಓಡೋಡಿ ಹೋಗುತ್ತಿದೆ. ಜಿಲ್ಲೆಯಲ್ಲಿ ಎಂಟು ಕಂಟೆನ್ಮೆಂಟ್ ಜೋನ್ ಗಳನ್ನ ಮಾಡಲಾಗಿದೆ. ಇಂತಹ ಕೆಲವೆಡೆ ಚಿಕ್ಕ ಗಲಾಟೆಗಳಾಗಿವೆ. ಹತ್ತು ಸಾವಿರಕ್ಕೂ ಹೆಚ್ಚು ಪರೀಕ್ಷೆಗಳಾಗಿವೆ. ಎಲ್ಲೆಡೆ ಈಗ ಅತಿ ಹೆಚ್ಚು ಪರಿಶೀಲನೆ ನಡೆಯತ್ತಿದೆ. ಸೊಂಕಿತರ ಹುಡುಕಾಟಕ್ಕೆ ವೈಯುಕ್ತಿಕ ಕಾಳಜಿಯೂ ಇರಲಿ. ಅನುಮಾನ ಎನಿಸಿದಾಕ್ಷಣ ಆಸ್ಪತ್ರೆಗೆ ಹೋಗುವುದು ಅತ್ಯಗತ್ಯ. ಎಚ್ಚರದ ಹೆಜ್ಜೆಯಷ್ಟೆ ನಮ್ಮದಾಗಿರಲಿ

ಹುಷಾರ್
ಬೀದಿಯಲ್ಲೇ ತಿಂಡಿ ಊಟ, ಪಾನಿಪುರಿ, ಗೋಬಿ,…. ಎಲ್ಲವೂ ಸಿಗುತ್ತಿದೆ. ಅಲ್ಲೇ ತಿನ್ನಬಹುದು. ನಮ್ಮ ವ್ಯವಸ್ಥೆ ನಗರದಲ್ಲಿ ಸೋತಿದೆ. ಎಚ್ಚರಿಕೆಯಷ್ಟೆ ನಮ್ಮದಾಗಿರಲಿ.

By admin

ನಿಮ್ಮದೊಂದು ಉತ್ತರ

You missed

error: Content is protected !!