ನವದೆಹಲಿ: ಕೊರೊನಾ ಕಾಟದಿಂದಾಗಿ ಚಾಲನಾ ಪರವಾನಗಿ, ಪರ್ಮಿಟ್ ಅವಧಿ ಮುಗಿದು ನವೀಕರಣಗೊಳಿಸಲಾಗದೆ ಪರಿತಪಿಸುತ್ತಿದ್ದವರಿಗೆ ಮತ್ತೊಮ್ಮೆ ಮಾನ್ಯತೆ ಅವಧಿಯನ್ನು ಈ ವರ್ಷದ ಸೆಪ್ಟಂಬರ್ ವರೆಗೆ ವಿಸ್ತರಿಸಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಇಂದು ತಿಳಿಸಿದ್ದಾರೆ. 
ಈ ಕುರಿತು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಿದ್ದಾರೆ. ಫಿಟ್ ನೆಸ್, ಪರ್ಮಿಟ್ (ಎಲ್ಲ ರೀತಿಯ) ಚಾಲನಾ ಪರವಾನಗಿ, ನೋಂದಣಿ ಅವಧಿ ಮುಗಿದಿದ್ದು ಲಾಕ್ ಡೌನ್ ಕಾರಣದಿಂದ ನವೀಕರಣ ಮಾಡಿಸಿಕೊಳ್ಳದಿದ್ದರೂ   ಅವುಗಳ ಮಾನ್ಯತೆಯನ್ನು ಎರಡನೇ ಬಾರಿ ವಿಸ್ತರಿಸಿದೆ. ಮೊದಲು ಮಾರ್ಚ್ 30 ರಂದು ಜೂನ್ 30 ವರೆಗೂ ಕೇಂದ್ರ ಸರ್ಕಾರ ವಿಸ್ತರಿಸಿ ಆದೇಶ ಹೊರಡಿಸಿತ್ತು.

By admin

ನಿಮ್ಮದೊಂದು ಉತ್ತರ

You missed

error: Content is protected !!