ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಸರ್ಕಾರಿ ಯೋಜನೆಗಳ ಸಣ್ಣ ಸಣ್ಣ ವಿದ್ಯುತ್ ಕಾಮಗಾರಿಗಳ ಕಾರ್ಯಾದೇಶಗಳನ್ನು ಕ್ರೋಢಿಕರಿಸಿ ಬೃಹತ್ ಮಟ್ಟದ ದರ ಒಪ್ಪಂದ ಮತ್ತು ಟೆಂಡರ್...
ಮಂಜೂರಾದ ಸ್ಮಶಾನ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿರುವುದನ್ನು ವಿರೋಧಿಸಿ ಅರಮಘಟ್ಟ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸರ್ವೆ ನಂ. ೨೧ರಲ್ಲಿ ಸ್ಮಶಾನಕ್ಕೆ...
/ನೈರುತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೇಟ್ ಸಿಗುವ ನಿರೀಕ್ಷೆ ಇದ್ದು, ಅದಕ್ಕಾಗಿ ನಾಳೆಯಿಂದಲೇ ಕ್ಷೇತ್ರದಲ್ಲಿ ಪ್ರವಾಸ ಮಾಡುವೇ ಎಂದು ಕೆ.ಪಿ.ಸಿ.ಸಿ. ವಕ್ತಾರ, ಹಾಗೂ...
ಶಿವಮೊಗ್ಗ, ಜ.೧೬:ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದು ಹಾಗೂ ಕೋಮು ಸಂಘಷಕ್ಕೆ ಪ್ರಚೋದನೆ ಹೇಳಿಕೆ ನೀಡಿರುವ ಸಂಸದ ಅನಂತ್ಕುಮಾರ್ ಹೆಗಡೆಯವರನ್ನು ಕೂಡಲೇ ಬಂಧಿಸಬೇಕು...
ಟ್ಯಾಲೆಂಟ್ಸ್ಪ್ರಿಂಟ್ ತನ್ನ ಮಹಿಳಾ ಇಂಜಿನಿಯರ್ಸ್ ಕಾರ್ಯಕ್ರಮದ 6 ನೇ ಸಮೂಹವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ, ಇದನ್ನು ಗೂಗಲ್ ಬೆಂಬಲಿಸುತ್ತದೆ ಆಯ್ದ 200 ವಿದ್ಯಾರ್ಥಿಗಳು ಕಾರ್ಯಕ್ರಮದ...
ಜಿಲ್ಲೆಯಾದ್ಯಂತ ಸುಗ್ಗಿ ಹಬ್ಬ ಸಂಭ್ರಮ/ಕೃಷಿ ಪರಿಕರಗಳನ್ನು ಶುಚಿಗೊಳಿಸಿ ಪೂಜಿಸಿದ ರೈತರು | ದೇವಾಲಯಗಳಲ್ಲಿ ವಿಶೇಷ ಪೂಜೆ
![Untitled-12 copy](https://tungataranga.com/wp-content/uploads/2024/01/Untitled-12-copy-768x512.jpg)
ಜಿಲ್ಲೆಯಾದ್ಯಂತ ಸುಗ್ಗಿ ಹಬ್ಬ ಸಂಭ್ರಮ/ಕೃಷಿ ಪರಿಕರಗಳನ್ನು ಶುಚಿಗೊಳಿಸಿ ಪೂಜಿಸಿದ ರೈತರು | ದೇವಾಲಯಗಳಲ್ಲಿ ವಿಶೇಷ ಪೂಜೆ
ಶಿವಮೊಗ್ಗ, ಜ.೧೫:ಜಿಲ್ಲೆಯಾದ್ಯಂತ ಸುಗ್ಗಿ ಹಬ್ಬ ಮಕರ ಸಂಕ್ರಮಣವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಹಿನ್ನಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.ಅಗತ್ಯ ವಸ್ತುಗಳನ್ನು ಖರೀದಿಸಲು...
ಶಿವಮೊಗ್ಗ,ಜ.೧೫ : ಯಾರೋ ಮಾಡಿದ ಕೆಲಸವನ್ನು ನಮ್ಮದೆಂದು ಹೇಳಿಕೊಂಡು ರಿಬ್ಬನ್ ಕಟ್ ಮಾಡುವ ದಾರಿದ್ರ್ಯ ನನಗೆ ಬಂದಿಲ್ಲ. ಇದನ್ನು ತಿಳಿಯದೆ ಸಚಿವ ಮಧು...
ಶಿವಮೊಗ್ಗ,ಜ.೧೫: ರಾಜ್ಯದಲ್ಲಿ ಇನ್ನೂ ಬಿಜೆಪಿ ಸರ್ಕಾರವೇ ಇದೆ ಎಂಬ ಭ್ರಮೆಯಲ್ಲಿ ಸಂಸದ ರಾಘವೇಂದ್ರ ತೇಲುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ವ್ಯಂಗ್ಯವಾಡಿದ್ದಾರೆ....
ಶಿವಮೊಗ್ಗ : ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣ, ಅದ್ಭುತ ಚಿಂತಕ – ಮಹಾ ಯೋಗಿ ಸಿದ್ದರಾಮೇಶ್ವರರು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು...
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಗುಜರಾತ್ನಲ್ಲಿ ನಡೆದ ‘ವೈಬ್ರೆಂಟ್ ಗುಜರಾತ್ ಶೃಂಗಸಭೆ’ಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ‘ಮೋದಿಯವರ ಮೂರನೇ ಬಾರಿಯ ಪ್ರಧಾನಿಯ ಅವಧಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಮೂಲಕ ಜಗತ್ತಿನ ಮುಂದೆ ಹೆಮ್ಮೆಯಿಂದ ತೆಲೆ ಎತ್ತಿ ನಿಲ್ಲಲಿದೆ’ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಎರಡು ದಶಕಗಳ ಹಿಂದೆಯೇ ‘ವೈಬ್ರೆಂಟ್ ಗುಜರಾತ್’ ಅನ್ನು ರೂಪಿಸಿದ್ದರು ಮತ್ತು ಅದರ ಫಲಿತಾಂಶವನ್ನು ನಾವಿಂದು ಕಾಣಬಹುದು. ಸ್ವಾವಲಂಬಿ ಮತ್ತು ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆಯ ಪಾತ್ರವು ತುಂಬಾ ಮಹತ್ವದ್ದಾಗಿದೆ. ನವ ಕಲ್ಪನೆಗಳು, ನಾವೀನ್ಯತೆ ಮತ್ತು ಹೂಡಿಕೆಯ ಮೂಲಕ, ‘ವೈಬ್ರೆಂಟ್ ಗುಜರಾತ್ ಶೃಂಗಸಭೆ’ ಗುಜರಾತ್ ಮಾತ್ರವಲ್ಲದೆ ಇಡೀ ದೇಶದ ಆರ್ಥಿಕತೆಯನ್ನು ಬಲಪಡಿಸಿದೆ. ದಶಕಗಳ ಕಾಲ,ಗುಜರಾತ್ನಲ್ಲಿ ಆಡಳಿತ ನೀಡಿದ ಮೋದಿ-ಶಾ ಜೋಡಿಯು ಗುಜರಾತನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಶ್ರಮಿಸಿದರು, ಮತ್ತು ಈ ಗುಜರಾತ್ ಅಭಿವೃದ್ದಿ ಮಾದರಿಯ ಆಧಾರದ ಮೇಲೆಯೇ ದೇಶದ ನಾಗರಿಕರು ಮೋದಿಯವರಿಗೆ ರಾಷ್ಟ್ರದ ಅಧಿಕಾರ ಹಸ್ತಾಂತರಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಂದು ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಉತ್ಪಾದನೆ ಮತ್ತು ಹೂಡಿಕೆಗೆ ಭಾರತವು ಅತ್ಯಂತ ನೆಚ್ಚಿನ ತಾಣವಾದರೆ, ಭಾರತದೊಳಗೆ ಗುಜರಾತ್ ಅತ್ಯಂತ ನೆಚ್ಚಿನ ತಾಣವಾಗಿದೆ. ಪ್ರಧಾನಿಯವರ ನಾಯಕತ್ವದಲ್ಲಿ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ‘ವೈಬ್ರೆಂಟ್ ಗುಜರಾತ್ ಶೃಂಗಸಭೆ’ ನವ ಕಲ್ಪನೆಗಳು ಮತ್ತು ನಾವೀನ್ಯತೆಗೆ ವೇದಿಕೆಯನ್ನು ಒದಗಿಸುವ ಮೂಲಕ ರಾಜ್ಯದೊಳಗೆ ಹೂಡಿಕೆಯನ್ನು ತರಲು ಕೆಲಸ ಮಾಡಿದೆ. ಇದು ಗುಜರಾತ್ ಮಾತ್ರವಲ್ಲದೇ ಇಡೀ ದೇಶದ ಆರ್ಥಿಕತೆಗೆ ಪ್ರಯೋಜನ ನೀಡಿದೆ. ಈ ಕಾರಣಕ್ಕಾಗಿಯೇ ದೇಶದ ಹಲವು ರಾಜ್ಯಗಳು ವೈಬ್ರಂಟ್ ಗುಜರಾತ್ ಮಾದರಿಯನ್ನು ತಮ್ಮ ಕೈಗಾರಿಕಾ ಅಭಿವೃದ್ಧಿಗಾಗಿ ಅಳವಡಿಸಿಕೊಂಡಿವೆ. ಮೋದಿಯವರು ಗುಜರಾತ್ಅನ್ನು ಒಳ್ಳೆಯ ನೀತಿ ಚಾಲಿತ ರಾಜ್ಯವನ್ನಾಗಿ ಮಾಡಿದರು, ಅದರಿಂದಾಗಿ ಇಂದು ಪ್ರಪಂಚದಾದ್ಯಂತದ ಹೂಡಿಕೆದಾರರು ಆ ನೀತಿಗಳಿಂದ ಆಕರ್ಷಿತರಾಗಿ ಗುಜರಾತ್ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಗುಜರಾತ್ ಭಾರತದ ಅಭಿವೃದ್ಧಿಯ ಹೆಬ್ಬಾಗಿಲಾಗಿದೆ.