ಮಂಜೂರಾದ ಸ್ಮಶಾನ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿರುವುದನ್ನು ವಿರೋಧಿಸಿ ಅರಮಘಟ್ಟ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸರ್ವೆ ನಂ. ೨೧ರಲ್ಲಿ ಸ್ಮಶಾನಕ್ಕೆ ಎಂದು ಜಾಗವನ್ನು ಮೀಸಲಿಡಲಾಗಿತ್ತು. ಊರಿನಲ್ಲಿ ಹೆಣ ಉಳಲು ಅಥವಾ ಸುಡಲು ಯಾವುದೇ ಜಾಗವಿರುವುದಿಲ್ಲ. ಆದರು, ಸ್ಮಶಾನಕ್ಕೆಗಾಗಿ ಮೀಸಲಿಟ್ಟ ಜಾಗದಲ್ಲಿ ಕೆಲವ ರಾಜಕೀಯ ಭಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಾಣದ ಬಲಾಢ್ಯರ ಕುತಂತ್ರದಿಂದ
೧೯೯೨ರಲ್ಲಿ ಸರ್ಕಾರ ಸಾರ್ವಜನಿಕ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ೧೫ರಿಂದ ೨೦ ಎಕರೆ ಜಮೀನು ಹೊಂದಿರುವಂತಹ ಪ್ರಭಾವಿ ವ್ಯಕ್ತಿಗಳಿಗೆ ೨೦೧೫ರಲ್ಲಿ ಮಂಜೂರು ಮಾಡಿ ೨೦೧೮ರಲ್ಲಿ ಪೂಡಿ ಮಾಡಿರುತ್ತಾರೆ. ಗ್ರಾಮಲೆಕ್ಕಾಧಿಕಾರಿ ಯಾಗಿದ್ದ ಮಹದೇವ ಆರಂಡೆ,
ಈಗಾ ಗಲೇ ಸರ್ವೆ ನಂ. ೨೧ರಲ್ಲಿ ಸ್ಮಶಾನಕ್ಕೆ ಎಂದು ಮೀಸಲಿಟ್ಟ ಜಾಗವನ್ನು ತಮ್ಮ ಆಪ್ತರಿಗೆ ಮಂಜೂರಾತಿ ಮಾಡಿಸಲು ಕಾರಣರಾಗಿದ್ದಾರೆ.
ಈ ಸಂದರ್ಭದಲ್ಲಿ ಅಣ್ಣಪ್ಪ, ಮಲ್ಲಿಕಾರ್ಜುನ, ಪ್ರವೀಣ್, ನಾಗ ರಾಜ್, ಕೃಷ್ಣಮೂರ್ತಿ, ಪ್ರಸನ್ನ ಮೊದಲಾದವರು ಇದ್ದರು.