![1](https://tungataranga.com/wp-content/uploads/2025/02/1-1-1024x1365.jpg)
ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗದಿಂದ ಬೆಳೆದು ಬಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ ಐತಿಹಾಸಿಕ ದಾಖಲೆಯ ಮತ ಪಡೆದ ಸಂತೆ ಕಡೂರಿನ ಹರ್ಷಿತ್ ಗೌಡ ಶ್ರೀನಿವಾಸ್ ಹಾಗೂ ಶೋಭಾ ದಂಪತಿಗಳ ಪುತ್ರ.
![](http://tungataranga.com/wp-content/uploads/2025/02/1-1-768x1024.jpg)
![](http://tungataranga.com/wp-content/uploads/2025/02/3.jpg)
ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಮಾನ್ಯತೆ ಇದೆ. ಇಡೀ ಪಕ್ಷ ನಾನಾ ವಿಭಾಗಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಇಡೀ ಪಕ್ಷಕ್ಕೆ ಬುಡ ಎಂದು ಕರೆದುಕೊಳ್ಳುವ ಎನ್ ಎಸ್ ಯು ಐ ಹಾಗೂ ಯುವ ಕಾಂಗ್ರೆಸ್ ಕಾಂಗ್ರೆಸ್ ಪಕ್ಷಕ್ಕೆ ನಿಜವಾದ ಶಕ್ತಿ ಎಂದರೆ ತಪ್ಪಾಗಲಿಕ್ಕಿಲ್ಲ.
![](http://tungataranga.com/wp-content/uploads/2025/02/2-1-746x1024.jpg)
![](http://tungataranga.com/wp-content/uploads/2025/02/4.jpg)
![](http://tungataranga.com/wp-content/uploads/2025/02/IMG_20250125_140612-1.jpg)
ಈ ಬಾರಿಯ ಆನ್ಲೈನ್ ಚುನಾವಣೆಯಲ್ಲಿ ದಾಖಲೆಯ ಅಂದರೆ ಇಲ್ಲಿಯವರೆಗೂ ಯಾರೂ ಪಡೆಯಲಾರದಷ್ಟು ಅಂಕ ಗಳಿಕೆ ಮೂಲಕ ಫಲಿತಾಂಶವನ್ನು ಪಡೆದು ಒಂದು ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದರೆ ಅದು ತಪ್ಪಾಗಲಿಕ್ಕಿಲ್ಲ.
![](http://tungataranga.com/wp-content/uploads/2023/04/Screenshot_2023_0226_070755-1.jpg)
ಹರ್ಷಿತ್ ಗೌಡ ಅವರು ಸುಮಾರು 25 ಸಾವಿರಕ್ಕೂ ಹೆಚ್ಚು ಅಂಕಗಳ ಮೂಲಕ ಇಂತಹದೊಂದು ಗೆಲುವು ಸಾಧಿಸಲು ಅವರು ಎನ್ ಎಸ್ ಯು ಐ ಮೂಲಕ ಕಟ್ಟಿದ ಸಂಘಟನೆ ಹಾಗೂ ಆತ್ಮೀಯತೆ ಅದಕ್ಕೆ ಕಾರಣ ಎನ್ನಬಹುದು. ಗ್ರಾಮೀಣ ಭಾಗದ ಯುವಕನೋರ್ವ ಜಿಲ್ಲೆಯ ಮುಖ್ಯ ಕೇಂದ್ರದ ಶಕ್ತಿಯಾಗಿ ಅದು ಇದೇ ಮೊದಲ ಬಾರಿ ಯುವ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಗೆಲುವು ಸಾಧಿಸಿದ್ದು ನಿಜಕ್ಕೂ ವಿಶೇಷವೇ ಹೌದು.
ಅವರು ಹಿಂದೆ ಎನ್ ಎಸ್ ಯು ಐ ನಲ್ಲಿ ಇದ್ದ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಹತ್ತು ಹಲವು ಸಮಸ್ಯೆಗಳಿಗೆ ಪ್ರತಿಭಟನೆಯ ಚುಕ್ಕಾಣಿ ವಹಿಸಿದ್ದ ಹರ್ಷಿತ್ ಗೌಡ ಅವರು ಅಂದಿನ ಕುಲಪತಿ ವೀರಭದ್ರಪ್ಪ ಅವರ ಭ್ರಷ್ಟಾಚಾರದ ವಿರುದ್ಧ ರಾಜ್ಯಪಾಲರ ಹಂತದಲ್ಲಿ ದಾಖಲೆಯನ್ನು ತೆಗೆದುಕೊಂಡು ಹೋಗಿ ಇಡೀ ಪ್ರಕರಣ ತನಿಖೆಗೆ ಆದೇಶಿಸುವಂತೆ ಮಾಡುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.
ವಿದ್ಯಾರ್ಥಿಗಳ ಪ್ರತಿ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಜಿಲ್ಲೆಯಲ್ಲಿ ನಡೆಯುವ ಎನ್ ಎಸ್ ವಿ ಐ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಡಿಪ್ಲೋಮೋ ಪದವೀಧರ ಹರ್ಷಿತ್ ಗೌಡ ಅವರ ಹವ್ಯಾಸ ರೈತಾಪಿ ಬದುಕು. ಹಾಗೆಯೇ ಅವರ ಚಿಕ್ಕಮ್ಮ ಶಿವಮೊಗ್ಗ ಜಿಲ್ಲಾ ಜಿಲ್ಲಾ ಪಂಚಾಯತ್ ನ ನಿಕಟಪೂರ್ವ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು ಮತ್ತು ಅವರ ಚಿಕ್ಕಪ್ಪ ರಾಜಕಾರಣದಲ್ಲಿ ಸಕ್ರಿಯವಾಗಿರುವ ನಿಕಟಪೂರ್ವ ಹಾಪ್ಕಾಮ್ಸ್ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ನ ಪ್ರಮುಖರಾದ ವಿಜಯಕುಮಾರ್ (ಧನಿ) ಅವರ ಆಶೀರ್ವಾದದೊಂದಿಗೆ ಅತಿ ಹೆಚ್ಚು ಅಂತರದ ಗೆಲುವು ದಾಖಲಿಸಿದ್ದಾರೆ. ಯುವ ಪ್ರತಿಭೆಗಳ ಅನಾವರಣಕ್ಕೆ ಹಾಗೂ ಯುವ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಮಹತ್ತರವನ್ನು ಹೊಂದಿದ್ದಾರೆ.
ಬರ್ಜರಿ ಗೆಲುವು ಅಂಕಿಅಂಶ
ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ನ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಹರ್ಷಿತ್ ಗೌಡ ಅವರು ಐತಿಹಾಸಿಕ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
ಹರ್ಷಿತ್ ಗೌಡ ಇವರು ಭರ್ಜರಿ 33,408 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, 48,473 ಪಡೆದಿದ್ದಾರೆ. ಯುವ ಕಾಂಗ್ರೆಸ್ನ ಚುನಾವಣೆಯ ಇತಿಹಾಸದಲ್ಲೇ ಇದು ಭಾರೀ ಮತಗಳ ಅಂತರವಾಗಿದೆ.
ಕಾಂಗ್ರೆಸ್ ಪಕ್ಷವು ಪದಾಧಿಕಾರಿಗಳ ಆಯ್ಕೆಯನ್ನು ಪ್ರಜಾಪ್ರಭುತ್ವ ಮಾದರಿಯಲ್ಲೇ ನಡೆಸುತ್ತಾ ಬಂದಿದೆ. ಅದರಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನೂ ಚುನಾವಣೆಯ ಪ್ರಕ್ರಿಯೆಯ ಮೂಲಕವೇ ಆಯ್ಕೆ ಮಾಡುತ್ತಾ ಬಂದಿದೆ. ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ನ ಚುನಾವಣಾ ಪ್ರಕ್ರಿಯೆಯು 2024ರ ಆಗಸ್ಟ್ 20ರಿಂದ ಸೆಪ್ಟಂಬರ್ 22ರ ವರೆಗೆ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು 1,22,144 ಮತದಾರರು ನೋಂದಣಿಯಾಗಿದ್ದರು. ಇದರಲ್ಲಿ ತಿರಸ್ಕತಗೊಂಡು ಅಂತಿಮವಾಗಿ 64,081 ಅರ್ಹ ಮತದಾರರು ಉಳಿದಿದ್ದರು. ಅಧ್ಯಕ್ಷ ಸ್ಥಾನಕ್ಕೆ ಹರ್ಷಿತ್ ಗೌಡ ಮತ್ತು ಹಿಂದಿನ ಅಧ್ಯಕ್ಷರಾಗಿದ್ದ ಹೆಚ್.ಪಿ. ಗಿರೀಶ್ ನಡುವೆ ನಡೆದ ಹಣಾಹಣಿಯಲ್ಲಿ ಹರ್ಷಿತ್ ಗೌಡ 48,473 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ 2ನೇ ಸ್ಥಾನ ಪಡೆದ ಹೆಚ್.ಪಿ. ಗಿರೀಶ್ 15,065 ಮತಗಳನ್ನು ಪಡೆದು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಚರಣ್ ಜೆ. (10,241), ಪ್ರಥಮ ಉಪಾದ್ಯಕ್ಷರಾಗಿ ಲೋಕೇಶ್ ಬಿ. (3266), ದ್ವಿತೀಯ ಉಪಾಧ್ಯಕ್ಷರಾಗಿ ವಿನಯ್ ತಾಂಡ್ಲೆ (824), ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಎಸ್. (6,478) ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ನಿತಿನ್ ಈ.ಟಿ. (2,365) ಆಯ್ಕೆಯಾಗಿದ್ದಾರೆ.
ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಮಹಮ್ಮದ್ ಶಫಿ (12,105), ಉಪಾಧ್ಯಕ್ಷರಾಗಿ ಅಲ್ತಾಫ್ ಅಹ್ಮದ್ (2,727), ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಪೂರ್ಣೇಶ್ ಜಿ.ಪಿ. (6,200), ಉಪಾಧ್ಯಕ್ಷರಾಗಿ ಸಂದೀಪ್ ಗೌಡ ಬಿ.ಜಿ. (1,563), ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಮಹೇಂದ್ರ ಹೆಚ್.ಜಿ. (1,528), ಉಪಾಧ್ಯಕ್ಷರಾಗಿ ಉಮೇಶ ಜಿ. (898), ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಮಂಜುನಾಯ್ಕ (9,196), ಉಪಾಧ್ಯಕ್ಷರಾಗಿ ಸಾಜಿದ್ ಆಲಿ (2,214), ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ (403), ಉಪಾಧ್ಯಕ್ಷರಾಗಿ ಪ್ರದೀಪ್ ಕುಮಾರ್ (205) ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಬ್ಲಾಕ್ ಅಧ್ಯಕ್ಷರುಗಳಾಗಿ ಹದಿನಾಲ್ಕು ಜನ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಉತ್ತರ ಬ್ಲಾಕ್ ಅಧ್ಯಕ್ಷರಾಗಿ ಗಿರೀಶ್, ದಕ್ಷಿಣ ಬ್ಲಾಕ್ಗೆ ಮಹಮ್ಮದ್ ಗೌಸ್, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊಳೆಹೊನ್ನೂರು ಬ್ಲಾಕ್ಗೆ ಪ್ರವೀಣ್ ಕುಮಾರ್ ಡಿ.ಟಿ., ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಶಶಿಕುಮಾರ್ ಕೆ., ಭದ್ರಾವತಿ ಕ್ಷೇತ್ರದ ಭದ್ರಾವತಿ ನಗರ ಬ್ಲಾಕ್ಗೆ ಅಭಿಷೇಕ್ ಜೆ.,
ಭದ್ರಾವತಿ ಗ್ರಾಮಾಂತರ ಬ್ಲಾಕ್ಗೆ ಮಕ್ಸೂದ್ ಅಹ್ಮದ್, ತೀರ್ಥಹಳ್ಳಿ ಕ್ಷೇತ್ರದ ನಗರ ಬ್ಲಾಕ್ಗೆ ಶ್ರೇಯಸ್ ರಾವ್, ಗ್ರಾಮಾಂತರ ಬ್ಲಾಕ್ಗೆ ರವಿಕುಮಾರ್ ಹೆಚ್.ಡಿ., ಸಾಗರ ಕ್ಷೇತ್ರದ ಸಾಗರ ಬ್ಲಾಕ್ಗೆ ಸದ್ದಾಂ ಹುಸೇನ್, ಹೊಸನಗರ ಬ್ಲಾಕ್ಗೆ ವಿಜಯಕುಮಾರ್ ಎಂ.ಎನ್., ಸೊರಬ ಕ್ಷೇತ್ರದ ಸೊರಬ ಬ್ಲಾಕ್ಗೆ ಯಶೋಧರ, ಆನವಟ್ಟಿ ಬ್ಲಾಕ್ಗೆ ಹರೀಶ್, ಶಿಕಾರಿಪುರ ಕ್ಷೇತ್ರದ ಶಿಕಾರಿಪುರ ಬ್ಲಾಕ್ಗೆ ಶಿವು ಹೆಚ್.ಎಂ., ಶಿರಾಳಕೊಪ್ಪ ಬ್ಲಾಕ್ಗೆ ಮಹಮ್ಮದ್ ಅತಿಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.