![122](https://tungataranga.com/wp-content/uploads/2025/02/122-1024x682.jpg)
ಶಿವಮೊಗ್ಗ, ಫೆ.12:
ಶಿವಮೊಗ್ಗ ರಾಜೇಂದ್ರ ನಗರದ ಪ್ರತಿಷ್ಠಿತ ನಟನಂ ಬಾಲ ನಾಟ್ಯ ಕೇಂದ್ರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ.ಎಸ್. ಕೇಶವಕುಮಾರ್ ಪಿಳ್ಳೈ ಅವರ ನೇತೃತ್ವದಲ್ಲಿ ಆಯೋಜಿಸಿದ್ದ “ನಟನಂ ಕಲಾ ಸಂಸ್ಕೃತಿ ಉತ್ಸವ- 2025” ಕಾರ್ಯಕ್ರಮದಲ್ಲಿ ನಾಟ್ಯಸಂಭ್ರಮ ಮನಮೋಹಕವಾಗಿತ್ತು.
![](http://tungataranga.com/wp-content/uploads/2025/02/33-1024x682.jpg)
ಇದರಲ್ಲಿ ವಿಶೇಷವಾಗಿ ಒಡಿಸ್ಸಿ ನೃತ್ಯವನ್ನು ಬೆಂಗಳೂರಿನ ನವಭಾವ ನೃತ್ಯ ಶಾಲೆಯ ಫೌಂಡರ್ ಗುರು ಸೌಮ್ಯ ರಂಗಸ್ವಾಮಿ, ಬೆಂಗಳೂರಿನ ನಾಟ್ಯಪ್ರಿಯ ಕಲಾನಿಕೇತನ ಕೇಂದ್ರದ ಫೌಂಡರ್ ವಿದುಷಿ ಸುಪ್ರಿಯ ಕಾರ್ತಿಕೇಯನ್ ಕೂಚುಪುಡಿ ನೃತ್ಯ,
![](http://tungataranga.com/wp-content/uploads/2025/02/IMG_20250125_140540-1-502x1024.jpg)
ಮೋಹಿನಿ ಆಟಂ ನಾಟ್ಯವನ್ನು ಶಿವಮೊಗ್ಗ ಬೊಮ್ಮನಕಟ್ಟೆಯ ಶ್ರೀ ಶಿವಾನಿ ಭರತನಾಟ್ಯ ಕಲಾ ಕೇಂದ್ರದ ವಿದುಷಿ ಚೈತ್ರ ಕಾರ್ತಿಕ್, ಭರತನಾಟ್ಯಂ ಅನ್ನು ನಟನಂ ಕೇಂದ್ರದ ವಿಧುಷಿ ನಾಟ್ಯಶ್ರೀ ಚೇತನ್ ಹಾಗೂ ವಿದ್ವಾನ್ ಚೇತನ್ ಎಸ್. ಸಿ. ಬೆಂಗಳೂರಿನ ರಾಜರಾಜೇಶ್ವರಿ ನಗರದ ನಾಟ್ಯಶಂಕರ ನೃತ್ಯಾಲಯದ ವಿದ್ವಾನ್ ಮಾಲತೇಶ್ ಟಿಕಾರೆ ಪ್ರದರ್ಶಿಸಿದರು.
ವಿಶೇಷ ಆಕರ್ಷಣೆಯಾಗಿ ದಕ್ಷ ಯಜ್ಞ ನೃತ್ಯ ರೂಪಕವನ್ನ ವಿದ್ವಾನ್ ಡಾ. ಎಸ್. ಕೇಶವಕುಮಾರ್ ಪಿಳ್ಳೈ ಪ್ರದರ್ಶಿಸಿದ್ದು. ಈ ಸಂದರ್ಭದಲ್ಲಿ ಜಪಾನಿನ ಫ್ಯಾನ್ ಡ್ಯಾನ್ಸ್ ಹಾಗೂ ಈಜಿಪ್ಟಿನ ವಿಂಗ್ ಡ್ಯಾನ್ಸನ್ನು ಕಲಾವಿದರು ಪ್ರದರ್ಶಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದರು.