ಶಿವಮೊಗ್ಗ, ಏ.04:
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ಸಮ್ಮೇಳನವು ಬ್ರಹ್ಮಾವರದಲ್ಲಿ ನಡೆಯಿತು.

ಈ ಸಮ್ಮೇಳನದಲ್ಲಿ ಶಿವಮೊಗ್ಗ ನಗರದ, ಪ್ರಪಂಚದ ಪ್ರಪ್ರಥಮ ಮಹಿಳಾ ಘಟಕ ಎಂಬ ಹೆಗ್ಗಳಿಕೆಯ ಪಾತ್ರವಾದ ಶಿವಮೊಗ್ಗ ಭಾವನಾ ಲೀಜನ್ ಘಟಕವು ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ಪಡೆದ ಪ್ರಶಸ್ತಿಗಳ ವಿವರ

  1. ಔಟ್ ಸ್ಟ್ಯಾಂಡಿಂಗ್ ನ್ಯೂ ಲೀಜನ್ – ವಿನ್ನರ್
  2. ಆಲ್ ಲೇಡೀಸ್ ಸೆಂಚುರಿಯನ್ ನ್ಯೂ ಲೀಜನ್ – ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ (ಗ್ರೋತ್ ಅಂಡ್ ಡೆವಲಪ್ಮೆಂಟ್) ಸಾಧನೆಗಾಗಿ ಪ್ರಶಸ್ತಿ.
    3.ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್
    ಗ್ರೋತ್ ಬೂಸ್ಟರ್ ಪ್ರಶಸ್ತಿ
  3. ಸಾಂಸ್ಕೃತಿಕ ಕಲಾ ಸ್ಪರ್ಧಾ ವಿಭಾಗ ಪ್ರಥಮ ಬಹುಮಾನ..
    (5000 ನಗದು)
  4. ಸಮ್ಮೇಳನದಲ್ಲಿ ಹೆಚ್ಚು ಸದಸ್ಯರ ನೋಂದಣಿ ಹಾಗೂ ಪಾಲ್ಗೊಳ್ಳುವಿಕೆ ದ್ವಿತೀಯ ಪ್ರಶಸ್ತಿ
  5. 105 ಸದಸ್ಯತ್ವಕ್ಕಾಗಿ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಶೆಟ್ಟಿರವರಿಗೆ ರಾಷ್ಟ್ರೀಯ ಸಂಯೋಜಕರಾದ ನವೀನ್‌‌ ಅಮೀನ್ ರವರಿಂದ ವಿಶೇಷ ಪುರಸ್ಕಾರ.

ಹೀಗೆ ಹತ್ತು ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ಹೊತ್ತುತಂದ ಭಾವನಾ ಲೀಜನ್‍ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಂಭ್ರಮಾಚರಣೆ ಹಾಗೂ ಸದಸ್ಯರಿಂದ ಅನುಭವ ಹಂಚಿಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಹಿರಿಯ ಉಪಾಧ್ಯಾಯರಾದ ಎಸ್ .ವಿ. ಶಾಸ್ತ್ರಿಯವರನ್ನು ಗೌರವಿಸಲಾಯಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪ ಶೆಟ್ಟಿಯವರು ವಹಿಸಿದ್ದರು ಕಾರ್ಯದರ್ಶಿ ಸುರೇಖ ಮುರಳೀಧರ್, ಸಹಕಾರ್ಯದರ್ಶಿ ಮೃದುಲ ಮಂಜುನಾಥ್, ಉಪಾಧ್ಯಕ್ಷೆ ಹೇಮಾ ಅಪ್ಪಾಜಿ , ಮಾಲ ರಾಮಪ್ಪ, ಪ್ರತಿಮಾ ಡಾಕಪ್ಪ ಗೌಡ, ಲಲಿತಾ ಗುರುಮೂರ್ತಿ, ರಂಜನಿ ದತ್ತಾತ್ರಿ , ಶಾಂತಾ ಶೆಟ್ಟಿ, ಜಯಲಕ್ಷ್ಮಿ ಚಂದ್ರಹಾಸ, ಮಧುಮತಿ, ಶೋಭ ಸತ್ಯನಾರಾಯಣ್ ಹಾಗೂ ಇನ್ನೂ ಅನೇಕ ಸದಸ್ಯರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!