ಶಿವಮೊಗ್ಗ, ಅ.09:
ಯುವತಿಯೋರ್ವಳು ಚಿಕ್ಕದೊಂದು ವಿಚಾರಕ್ಕೆ ಮನೆಯವರೊಂದಿಗೆ ಜಗಳ ಮಾಡಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಪ್ರಯತ್ನಕ್ಕೆ ಬ್ರೇಕ್ ಹಾಕುವಲ್ಲಿ ಶಿವಮೊಗ್ಗ ಪೊಲೀಸ್ ವ್ಯವಸ್ಥೆ ಯಶಸ್ವಿಯಾಗಿದೆ.
ಶಿಮೊಗ್ಗ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕ ನಗರದ 24 ವಯಸ್ಸಿನ ಯುವತಿ ನಿನ್ನೆ ರಾತ್ರಿ ಮನೆಯಲ್ಲಿ ಚಿಕ್ಕದೊಂದು ವಿಚಾರಕ್ಕೆ ಜಗಳ ಮಾಡಿದ್ದಾರೆ. ಮೊಬೈಲ್ ವೀಕ್ಷಣೆ ಇದಕ್ಕೆ ಕಾರಣ ಇರಬಹುದೆಂದು ಹೇಳಲಾಗುತ್ತಿದೆ.
ಮನೆಯ ಜಗಳದ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ 12:30 ಮನೆಯಿಂದ ಹೊರಗೆ ಬಂದಿದ್ದಾರೆ. ಪೋಷಕರು ಗಾಬರಿಗೊಂಡು ಕೂಡಲೇ ಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸ್ ವ್ಯವಸ್ಥೆ ಎಲ್ಲೆಡೆ ಮಾಹಿತಿ ರವಾನಿಸಿದೆ.
ಈ ಮೂಲಕ ಮಾಹಿತಿ ಪಡೆದ ಕೋಟೆ ಪೊಲೀಸ್ ಠಾಣೆಯ ಚೀತಾ ವಾಹನದ ಪೊಲೀಸ್ ಮನುಶಂಕರ್ ಅವರಿಗೆ ಯುವತಿ ಪತ್ತೆಯಾಗಿದ್ದಾರೆ.
ಕೂಡಲೇ ಆಕೆಯ ಮನವೊಲಿಸಿ ಆಕೆಯನ್ನು ಜಯನಗರ ಪೊಲೀಸ್ ಠಾಣೆಗೆ ಕರೆತಂದು ಪೋಷಕರನ್ನು ಕರೆಸಿ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್ ವ್ಯವಸ್ಥೆಯ ಗಾಂಭೀರ್ಯತೆ ಹಾಗೂ ಕಾರ್ಯಕ್ಷಮತೆಯನ್ನು ಅರ್ಥಮಾಡಿಕೊಳ್ಳಬಹುದು. ಸಕಾಲಿಕ ಸ್ಪಂದನೆಗೆ ಶಿವಮೊಗ್ಗ ಪೊಲೀಸರ ಶ್ರಮ ಶ್ಲಾಘನೀಯ.
ಶಿವಮೊಗ್ಗ ಪೊಲೀಸ್ ವ್ಯವಸ್ಥೆಯ ಬಗ್ಗೆ ನಾವು ಅಭಿನಂದಿಸಲೇಬೇಕು. ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್ ಅವರ ನೇತೃತ್ವದ ತಂಡಕ್ಕೆ 💐💐💐