ಕೊರೊನಾ ಬಾರದಿದ್ದರೆ, ಶಾಲೆ ಆರಂಭವಾಗಿದ್ದರೆ ಈ ಪುಟ್ಟ ಮಕ್ಕಳು ಬದುಕುತ್ತಿದ್ದರೇನೋ? ಕೆರೆಯಂಗಳದ ಪುಟ್ಟ ಪುಟ್ಟ ಮೀನುಗಳನ್ನು ಆರಿಸಿ ಕೊಂಡು ಬರಲು ಹೋದ ಪುಟಾಣಿಗಳಿ ಬ್ಬರು ನೀರು ಪಾಲಾಗಿರುವ ಘಟನೆ ಸೋಮಿನಕೊಪ್ಪ ಭೋವಿ ಕಾಲೋನಿಯ ಬಳಸೋಕರೆಯಲ್ಲಿ ನಡೆದಿದೆ.
ಇತ್ತೀಚೆಗಷ್ಟೆ ಶಿವಮೊಗ್ಗ ನಗರಾಭಿ ವೃದ್ಧಿ ಪ್ರಾಧಿಕಾರ ಇದರ ಅಭಿವೃದ್ಧಿಯ ಹೊಣೆಗಾರಿಕೆ ಹೊತ್ತು ಕೋಟ್ಯಾಂತರ ರೂಪಾಯಿ ಕಾಮಗಾರಿ ನಡೆಸುವುದಾಗಿ ಹೇಳುತ್ತಲೇ ಪಟ್ಟಭದ್ರ ಹಿತಾಸಕ್ತಿಳಾದ ಲೇ-ಔಟ್ ನಿರ್ಮಾತೃಗಳಿಗೆ ಅಕ್ರಮ ಮಣ್ಣು ಸಾಗಣಿಕೆಯ ವೇದಿಕೆಯನ್ನು ನಿರ್ಮಿಸಿಕೊಟ್ಟದಕ್ಕಾಗಿ ಮೀನುಗಳನ್ನು ತೊಳೆಯಲು ಹೋದ ಮಕ್ಕಳು ನೀರು ಪಾಲಾಗಿದ್ದಾರೆ.
ಘಟನೆಯ ವಿವರ: ಶಿವಮೊಗ್ಗದ ಸೋಮಿನಕೊಪ್ಪ ಕರೆಯಲ್ಲಿ ನಿನ್ನೆ ಸಂಜೆ ಕೆರೆಯಲ್ಲಿ ಪುಟ್ಟ ಪುಟ್ಟ ಮೀನುಗಳನ್ನು ತೆಗೆದುಕೊಂಡು ಬರುತ್ತಿದ್ದಾಗ ಅಡ್ಡ ದಿಡ್ಡಿ ತೆಗೆದಿರುವ ಗುಂಡಿಗಳಲ್ಲಿ ಒಂದೇ ಕುಟುಂಬದ ೧೧ ವರುಷದ ಪೂಜಾ ಹಾಗೂ ೯ ವರ್ಷದ ಮಾಲತೇಶ ಎಂಬ ಮಕ್ಕಳು ಸಾವು ಕಂಡ ಘಟನೆ ವರದಿ ಯಾಗಿದೆ. ಇದೇ ಸಂದರ್ಭದಲ್ಲಿ ಅವರ ಜೊತೆ ಹೋಗಿದ್ದ ಪುಟಾಣಿ ಬಾಲಕಿ ಯೊಬ್ಬಳು ಮನೆಗೆ ಬಂದು ಮಾಹಿತಿ ನೀಡಿದ್ದರಿಂದ ಮಕ್ಕಳು ಸಾವು ಕಂಡ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಸೋಮಿನಕೊಪ್ಪ ಕೆರೆಯಲ್ಲಿ ಎಂದಿನಂತೆ ಮೀನುಗಳನ್ನು ಹಿಡಿಯುತ್ತಿದ್ದರು. ಈ ಸಮಯದಲ್ಲಿ ದೊಡ್ಡ ದೊಡ್ಡ ಮೀನುಗಳನ್ನು ತೆಗೆದು ಕೊಂಡು ಸಣ್ಣ ಸಣ್ಣ ಮೀನುಗಳನ್ನು ಕರೆಯ ದಡದಲ್ಲಿ ಹಾಕುವುದು ವಾಡಿಕೆ ಇದನ್ನು ಗಮನಿಸಿದ ಭೋವಿ ಕಾಲೋ ನಿಯ ಮೂವರು ಮಕ್ಕಳು ಆ ಮೀನು ಗಳನ್ನು ತರಲು ಒಂದು ಕೈಯಲ್ಲಿ ಕವರ್ ಹಾಗೂ ಇನ್ನೊಬ್ಬ ಮಗುವಿನ ಕೈಯಲ್ಲಿ ಒಂದು ಡಬ್ಬಿ ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದೆ.
ಸ್ವಲ್ಪ ಮಣ್ಣು ಮಿಶ್ರಿತವಾದ ಚಿಕ್ಕ ಚಿಕ್ಕ ಮೀನುಗಳನ್ನು ಕೈಯಲ್ಲಿದ್ದ ಡಬ್ಬಿ ಹಾಗೂ ಕವರ್‌ನಲ್ಲಿ ಹಾಕಿಕೊಂಡು ಬರುತ್ತಿದ್ದ ವೇಳೆ ಕೇವಲ ೯ ವರ್ಷದ ಮಾಲತೇಶ ಎಂಬ ಮಗು ಕೆರೆಯಲ್ಲಿದ್ದ ಸುಮಾರು ೧೦ರಿಂದ ೧೫ ಅಡಿ ಗುಂಡಿಯ ಮೇಲ್ಭಾಗ ದಲ್ಲಿ ನಿಂತು ಮಣ್ಣು ಮಿಶ್ರಿತವಾದ ಮೀನುಗಳನ್ನು ತೊಳೆಯಲು ಹೋಗಿ ದ್ದಾನೆ. ಈ ಸಮಯದಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ಆಗ ಮೇಲ್ಬಾಗದಲ್ಲಿದ್ದ ಅಕ್ಕ ಪೂಜಾ ತನ್ನ ತಮ್ಮನನ್ನು ಕಾಪಾಡಲು ಹೋಗಿದ್ದಾಳೆ. ಈ ಸಂದರ್ಭದಲ್ಲಿ ತಾನೂ ಸಹ ಗುಂಡಿಯ ಆಳ ಅರಿಯದೇ ನೀರಿನಲ್ಲಿ ಬಿದ್ದಿದ್ದಾಳೆ.
ಇದನ್ನು ಗಮನಿಸಿದ ಚಿಕ್ಕ ಮಗು ಕೆರೆಯಿಂದ ಹೋಡಿ ಬಂದು ತಮ್ಮ ಅಮ್ಮನಿಗೆ ವಿಷಯ ತಿಳಿಸಿದ್ದಾಳೆ. ನಂತರ ಗ್ರಾಮದ ಜನ ವಿಷಯ ತಿಳಿದು ಕರೆಯಂಗಳಕ್ಕೆ ಓಡಿ ದ್ದಾರೆ. ದುರಂತವೆಂದರೆ ಅಷ್ಟರಲ್ಲಾಗಲೇ ಆ ಮಕ್ಕಳು ನೀರಿಲ್ಲಿ ಮುಳುಗಿದ್ದಾರೆ.
ಗ್ರಾಮದ ಯುವಕರು ಗಾಬರಿ ಯಿಂದ ಓಡಿ ಹೋಗಿ ಅವರ ಜೀ ವನ್ನು ಕಾಪಾಡಲು ನೀರಿಗೆ ಹಾರಿ ಪ್ರಯ ತ್ನಿಸಿದ್ದಾರೆ. ದುರಾದೃಷ್ಟವಶಾತ್ ಇಬ್ಬರು ಮಕ್ಕಳ ಶವವನ್ನು ಮಾತ್ರ ತೆಗೆಯಲು ಸಾಧ್ಯವಾಗಿದೆ.
ಸ್ಥಳಕ್ಕೆ ಆಗಮಿಸುವಂತೆ ಅಗ್ನಿ ಶಾಮಕ ದಳಕ್ಕೆ ಗ್ರಾಮಸ್ಥರು ಫೊನಾಯಿಸಿದರೂ ಸುಮಾರು ಹೊತ್ತಿನವರೆಗೆ ಸ್ಥಳಕ್ಕೆ ಆಗಮಿಸಿಲ್ಲವೆಂದು ದೂರಲಾಗುತ್ತಿದೆ. ನಂತರ ಗ್ರಾಮಸ್ಥರೇ ಮಕ್ಕಳ ಮೃತದೇ ಹವನ್ನ ಕೆರೆಯಿಂದ ತೆಗೆದಿದ್ದಾರೆ ಎನ್ನಲಾಗಿದೆ. ಪ್ರಕರಣ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸೋಮಿನಕೊಪ್ಪದಲ್ಲಿ ಸೂತಕದ ಛಾಯೆ:

ಸೋಮಿನಕೊಪ್ಪ ಭೋವಿ ಕಾಲೋನಿಯ ಮಕ್ಕಳಿಬ್ಬರ ದುರ್ಮರಣ ಇಡೀ ಗ್ರಾಮವನ್ನು ಸೂತಕದ ಛಾಯೆ ಆವರಿಸುವಂತೆ ಮಾಡಿತ್ತು. ಒಬ್ಬರಿಗೊಬ್ಬರು ಮುಖ ನೋಡುತ್ತಾ ದುಃಖಿಸುತ್ತಿದ್ದ ಸನ್ನಿವೇಶ ಎದ್ದು ಕಾಣುತ್ತಿತ್ತು. ಗ್ರಾಮದ ಕೆಲ ಯುವಕರು ಅಕ್ರಮ ಮಣ್ಣು ಸಾಗಣಿಕೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ವೃದ್ಧ ಮಹಿಳೆಯರ ಚೀತ್ಕಾರ ಮುಗಿಲು ಮುಟ್ಟುವಂತಿತ್ತು. ಪುಟಾಣಿಗಳಿಬ್ಬರ ಸಾವು ಇಡೀ ಗ್ರಾಮದಲ್ಲಿ ಕಂಬನಿ ಮೂಡಿಸಿತ್ತು.

ಪ್ರಾಣಕ್ಕೆ ಕುತ್ತು ತಂದ ಗುಂಡಿಗಳು
ಮಾನವನ ದುರಾಸೆಗೆ ಎಷ್ಟಿದ್ದರೂ ಸಾಲದು. ಈ ದುರಾಸೆಯೇ ಮಕ್ಕಳ ಪ್ರಾಣ ಹೋಗಲು ಕಾರಣವೆನ್ನಬಹುದಾಗಿದೆ. ಸೋಮಿನಕೊಪ್ಪ ಕರೆ ಮೊದಲು ಇಂತಹ ದೊಡ್ಡ ದೊಡ್ಡ ಗುಂಡಿಗಳೇ ಇರಲಿಲ್ಲ ಇತ್ತೀಚೆಗೆ ಕರೆಯ ಅಕ್ಕಪಕ್ಕದಲ್ಲಿ ತಲೆ ಎತ್ತಿರುವ ಈ ಲೇಔಟ್‌ಗಳಿಗೆ ಮಣ್ಣು ಹಾಕಲು ಸುಮಾರು ೧೦ರಿಂದ ೧೫ ಅಡಿಗಳಷ್ಟು ಉದ್ದದ ಗುಂಡಿಗಳು ಕೆರೆಯಲ್ಲಿ ನಿರ್ಮಾಗೊಂಡಿರುವುದು ಕಾಣಸಿಗುತ್ತವೆ. ಈ ಗುಂಡಿಗಳಲ್ಲಿ ಈಜು ಬರದೆ ಇರುವವರು ಸ್ವಲ್ಪ ಕಾಲುಜಾರಿ ಬಿದ್ದರೆ ಪ್ರಾಣ ಕಳೆದುಕೊಳ್ಳುವುದಂತೂ ಸತ್ಯ.

By admin

ನಿಮ್ಮದೊಂದು ಉತ್ತರ

You missed

error: Content is protected !!