ಶಿವಮೊಗ್ಗ, ಮಾ. 20:
ಪ್ರೀತಿ ಪ್ರೇಮದ ಮೋಸವಷ್ಟೆ ಅಲ್ಲ. ಮನಸಿನ ಜೊತೆ ಮದುವೆಯಾಗುವ ನಂಬುಗೆಯಿಂದ ದೈಹಿಕವಾಗಿ ದೇಹ ಒಪ್ಪಿಸಿದ್ದವಳಿಗೆ ಮೋಸ ಮಾಡಿದರೆ ಹೇಗಾಗಬೇಡ…?!
ಅದೂ ಉಪನ್ಯಾಸಕ ವೃತ್ತಿಯಲ್ಲಿರುವಾತ ಇಂತಹ ಕೃತ್ಯ ಮಾಡಿದ್ದಾನಂತೆ.
ಪೊಲೀಸ್ ಇಲಾಖಾ ವಿವರ ಇಂತಿದೆ:
ಶಿವಮೊಗ್ಗದ 34 ವರ್ಷದ ಯುವತಿಯು ಈ ಹಿಂದೆ ಸಹ್ಯಾದ್ರಿ ಕಾಲೇಜ್ನಲ್ಲಿ ಎಂ.ಎ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮಾರ್ನಮಿ ಬೈಲ್, ಶಿವಮೊಗ್ಗದ ವಾಸಿಯಾದ ಮುರುಳಿ ಟಿ. ಎಸ್ ಎಂಬ ಉಪನ್ಯಾಸಕರು ಪರಿಚಯವಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.
ಮುರುಳಿಯು ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರದಲ್ಲಿ ಆತ ಮದುವೆ ಆಗಲು ನಿರಾಕರಿಸಿರುತ್ತಾನೆ ಮತ್ತು ಆತನು ಬೇರೆ ಹುಡುಗಿಯ ಜೊತೆಗೆ ಮದುವೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದು ಈ ವಿಚಾರದಿಂದ ಬೇಸರಗೊಂಡು ಇಂದು ಬೆಳಿಗ್ಗೆ ಮನೆಯಲ್ಲಿ ಪ್ಯಾನಿಗೆ ಸೀರೆಯಿಂದ ನೇಣುಬಿಗಿದುಕೊಂಡು ಯುವತಿಯು ಮೃತಪಟ್ಟಿದ್ದಾಳೆ.
ಆರೋಪಿ ಮುರುಳಿ ಟಿ ಎಸ್ ಹಾಗೂ ಆತನಿಗೆ ಮದುವೆ ಮಾಡಿಕೊಳ್ಳ ಬೇಡ ಎಂದು ಕುಮ್ಮಕ್ಕು ನೀಡಿದ ಭಾಸ್ಕರ್ ಮತ್ತು ದೀಪಕ್ ಇವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ಮೃತೆಯ ಸಹೋದರ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0141/2022 ಕಲಂ 376, 306, 417, 114 ಸಹಿತ 34 IPC ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.


