ಶಿವಮೊಗ್ಗ, ಮಾ.20:
ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ದತೆ ನಡೆಯುತ್ತಿದ್ದು ದೇಗುಲದ ಅಮ್ಮನ ಮೂರ್ತಿಯು ವಿಶೇಷಾಲಂಕಾರವಾಗಿ ಈ ವರುಷ ಸುಮಾರು ಎರಡು ಕೆಜಿ ತೂಕದ ಬೆಳ್ಳಿ ಮುಖದೊಂದಿಗೆ ಕಂಗೊಳಿಸಲಿದೆ.
ಅಮ್ಮನ ವಿಗ್ರಹದ ಮುಖದ ಚಹರೆಯಲ್ಲಿ ಈ ಆಭರಣವನ್ನು ತಯಾರಿಸಿದ್ದು ಕೊಪ್ಪ ಮೂಲದ ಅಜಿತ್ ಎಂಬ ಕಲಾವಿದರಾಗಿದ್ದಾರೆ.
ಮಾರಿಕಾಂಬೆಯ ಭಕ್ತರಾದ ಬೆಂಗಳೂರು ಮೂಲದ ಬ್ಯಾಂಕ್ ಉದ್ಯೋಗಿ ಅರ್ಚನಾ ಅವರು ಈ ಕಾಣಿಕೆ ನೀಡಿದ್ದಾರೆ.


ಇಂದು ದೇಗುಲಕ್ಕೆ ಮುಖವಾಡವನ್ನು ಕಲಾವಿಧ ಅಜಿತ್ ಅವರು ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿ ಪದಾದಿಕಾರಿಗಳಿಗೆ ವಿತರಿಸಿದರು.
ಸಮಿತಿ ಅಧ್ಯಕ್ಷ ಎಸ್. ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಹಾಗೂ ಇತರರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!