ನಾಥ ಸಂಪ್ರದಾಯದ ದ್ವಾದಶ ಪೀಟಗಳಲ್ಲಿ ಆದಿ ಪೀಠವೇ ಶ್ರೀ ಆದಿಚುಂಚನಗಿರಿ ಪೀಠ. ಈ ಮಠದ ಗುರುಪರಂಪರೆಯು ದೀರ್ಘವಾದುದು, ಇದುವರೆಗೂ ೭೨ ಧರ್ಮಗುರುಗಳು ಮಠಾಧಿಪತಿಗಳಾಗಿದ್ದಾರೆ. ೭೧ನೇ ಪೀಠಾಧ್ಯಕ್ಷರಾದ ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮಿಗಳಿಂದಾಗಿ ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಅಲ್ಲದೆ ಮಕ್ಕಳ ವಸತಿ ಶಾಲೆ, ಅನಾಥಾಶ್ರಮ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳ ನ್ನು ಸ್ಥಾಪಿಸಿ, ನಿರ್ಗತಿಕರ ಬಗ್ಗೆ ವಿಶೇಷ ಮಮತೆಯನ್ನು ತೋರಿದ್ದಾರೆ.


ಜಾತ್ರೆ ಎಂದೊಡನೆ ಕಣ್ಮುಂದೆ ಬರುವುದು ಹೋಮ-ಹವನ, ಮೆರವಣಿಗೆ ರಥೋತ್ಸವ ಅನ್ನದಾ ಸೋಹ ಇತ್ಯಾದಿ ಧಾರ್ಮಿಕ ವಿಧಿ – ವಿಧಾನಗಳೊಂದಿಗೆ ಆದಿಚುಂನಗಿರಿ ಜಾತ್ರೆಯೂ ಮೇಲಿನ ಅಂಶಗಳೊಂದಿಗೆ ವೈಚಾರಿಕತೆ,ಕೃಷಿ ಜಾಗೃತಿ ಮಹತ್ವವನ್ನು ಸಾರುತ್ತಾ ಸಮಾಜ ಮುಖಿಯಾಗಿದೆ. ಇಲ್ಲಿ ಧಾರ್ಮಿಕ ವಿಧಿವಿಧಾನಗಳ ಜೊತೆಗೆ ನಾಡಿನ ಜನರಿಗೆ ವೈಚಾರಿಕತೆ ಮೂಡಿಸುವ ಗೋಷ್ಠಿ, ಕೃಷಿ ಮೇಳ, ಸರಳವಿವಾಹ,ಪೌರಾಣಿಕ ನಾಟಕಗಳ ಮಹತ್ವ, ಜ್ಞಾನ-ವಿಜ್ಞಾನ ನಡುವಿನ ಸಂಬಂಧವನ್ನು ತಿಳಿಸುತ್ತದೆ.


ಜಾತ್ರೆಗೆ ಹೊಸ ಭಾಷ್ಯವನ್ನು ಬರೆ ಯುವ ಮೂಲಕ ಜನಪರ ಜಾತ್ರೆಯ ನ್ನಾಗಿಸುವ ನಿಟ್ಟಿನಲ್ಲಿ ಪೀಠಾಧಿಪತಿಗ ಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂ ದನಾಥ ಸ್ವಾಮೀಜಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.ನಾಡಿನ ಪ್ರಮುಖ ಜಾತ್ರೆಗ ಳಲ್ಲಿ ಒಂದಾಗಿರುವ ಆದಿಚುಂಚನಗಿರಿ ಜಾತ್ರೆಗೆ ವೈಶಿಷ್ಟ ತಂದು ಕೊಡುವರು. ರೈತ ಸಮುದಾಯ,ಇದು ರೈತರ ಜಾತ್ರೆಯೆಂದು ಕರೆಯಿಸಿಕೊಳ್ಳುತ್ತದೆ. ಆದ್ದರಿಂದಲೇ ಆದಿಚುಂಚನಗಿರಿ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಜಾತ್ರಾಮ ಹೋತ್ಸವವನ್ನು ರೈತರ ಹೆಸರಿನಲ್ಲಿ ಭೈರವೈಕ್ಯಬಾಲಗಂಗಾಧರನಾಥ ಸ್ವಾಮೀಜಿ ನಡೆಸುತ್ತಿದ್ದರು. ಅದನ್ನ ಈಗಿನ ಸ್ವಾಮೀಜಿಯವರು ಮುಂದುವರಿಸುವ ಮೂಲಕ ಜಾತ್ರೆಯ ಸೊಬಗನ್ನು ಹೆಚ್ಚಿಸಿದ್ದಾರೆ.


“ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯ
ಶ್ರೀ ಕಾಲಭೈರವೇಶ್ವರ ಸ್ವಾಮಿ ಇಲ್ಲಿ ಪ್ರಮುಖ. ಬಾಗಿಲು ಭೈರವ,ಅನ್ನದಾನಿ ಭೈರವ,ಎಂದು ಕರೆಯುವುದು ರೂಢಿಯಲ್ಲಿದೆ.ಇದಲ್ಲದೆ ಬೆಟ್ಟದ ಭೈರವ, ಕಾಲಭೈರವ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಪೂರ್ವ-ಪಶ್ಚಿಮ ೨೭೫ ಅಡಿ ಹಾಗೂ ಉತ್ತರ-ದಕ್ಷಿಣ ೧೭೫ ಅಡಿಗಳ ವಿಸ್ತೀರ್ಣ ದಲ್ಲಿ ನಿರ್ಮಾಣ ವಾಗಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲ ಯವು, ಸುಂದರ ವಾದ ನಾಲ್ಕು ಗೋಪುರಗಳನ್ನು ಹೊಂದಿರುವ ದ್ರಾವಿಡ ಶೈಲಿಯ ದೇವಾಲಯದ ಮೂರು ಗೋಪುರಗಳು ೫೭ ಅಡಿ ಎತ್ತರವಿದ್ದು ಪೂರ್ವ ದಿಕ್ಕಿನಲ್ಲಿರುವ ರಾಜಗೋಪುರವು ೧೦೦ ಅಡಿ ಎತ್ತರವಿದೆ. ಚೋಳರ ಶೈಲಿಯ ವಿಮಾನ ಗೋಪುರ ಗಳುಳ್ಳ ದೇವಾಲಯದಲ್ಲಿ ಸುಂದರ ಕೆತ್ತನೆಯ೧೭೨ ಕಂಬಗಳಿವೆ. ಗರ್ಭಗುಡಿಯ ಮುಂಭಾಗದಲ್ಲಿ ಕೃಷ್ಣಶಿಲೆಯ ಆಕರ್ಷಕ ಅಷ್ಟ ಭೈರವ ವಿಗ್ರಹಗಳು,೬೪ ಅಷ್ಟಾಷ್ಠ ಭೈರವ ವಿಗ್ರಹಗಳಿದ್ದು,ನೋಡುಗರ ಕಣ್ಮನ ಸೆಳೆಯುತ್ತಿವೆ. ಸರಪಳಿಗಳು,ಕಿಟಕಿಗಳನ್ನು ಸಹ ಕಲ್ಲಿನಲ್ಲಿಯೇ ಕೆತ್ತಿರುವುದು ವಿಶೇಷ.ಪುಷ್ಕರಣಿ,ತಾವರೆಕೊಳಗಳನ್ನು ಹಾಗೂ ಬಿಂದು ಸರೋವರಗಳನ್ನು ನಿರ್ಮಿಸಲಾಗಿದ್ದು, ಭಾರಿ ಬಂಡೆಗಳಲ್ಲಿ ೨೩ ಅಡಿ ಎತ್ತರದ ಏಕಶಿಲಾ ನಾಗಲಿಂಗೇಶ್ವರ ಶಿವಲಿಂಗ,ಗಣಪತಿ ವಿಗ್ರಹಗಳನ್ನು ಕೆತ್ತಲಾಗಿದೆ.

ಗಂಗಾಧರೇಶ್ವರ ಸ್ವಾಮಿಯ ಮಹಿಮೆ
ಶ್ರೀ ಗಂಗಾಧರೇಶ್ವರ ದೇವಾಲಯದ ಬಗ್ಗೆ ಕಥೆಯೊಂದು ಪ್ರಚಲಿತವಾಗಿದೆ. ಹಿಂದೆ ಸಮೀಪದಲ್ಲಿ ಆರಣಿ ಎಂಬ ಪಾಳೆಯಗಾರರ ಸಂಸ್ಥಾನ ವಿತ್ತು, ಪಾಳೇಗಾರನಿಗೆ ಬಹುಕಾಲದವರೆಗೆ ಮಕ್ಕಳಿರಲಿಲ್ಲ, ಗಂಡು ಸಂತಾನ ವಾದರೆ ಗಿಣ್ಣಿಲ್ಲದ ಬಿದಿರಿನಲ್ಲಿ ತೊಟ್ಟಿಲು ಮಾಡಿಸುತ್ತೇನೆಂದು ಹರಕೆ ಮಾಡಿಕೊಂಡನು. ಬಳಿಕ ಗಿಣ್ಣಿಲ್ಲದ ಬಿದಿರು ತರಲು ಮೇದರನ್ನು ಚುಂಚನಗಿರಿಗೆ ಕಳುಹಿಸಿದ ಅವರು ಬಿದಿರು ಕಡಿದಾಗ ರಕ್ತ ಚಿಮ್ಮಿತು. ಆಗ ನಾನು ಈಶ್ವರ ಚುಂಚನಕಟ್ಟೆ ಕ್ಷೇತ್ರವನ್ನು ಶ್ರೀರಾಮನಿಗೆ ಬಿಟ್ಟುಕೊಟ್ಟು ಚುಂಚ -ಕಂಚರೆಂಬ ರಾಕ್ಷಸರನ್ನು ಸಂಹರಿಸಿ ಈ ಬಿದಿರಿನ ನೆಳಲಲ್ಲಿ ನೆಲೆಸಿದ್ದೇನೆ.ಇದನ್ನು ಪಾಳೇಗಾರನಿಗೆ ತಿಳಿಸಿ,ದೇವಾಲಯವನ್ನು ಕಟ್ಟಿಸುವಂತೆ ಹೇಳಿ,ಹಿಂದಿರುಗಿ ನೋಡದೆ ವಾಪಸಾಗಿ ಎಂದು ಅಶರೀರವಾಣಿಯಾಯಿತು. ಆದರೆ ಕುತೂಹಲದಿಂದ ಹಿಂತಿರುಗಿ ನೋಡಿದ ಆತ ರಕ್ತಕಾರಿ ಸತ್ತರು,ಕ್ಷೇತ್ರದ ಸೋಪಾನದ ಪಕ್ಕದಲ್ಲಿರುವ ಮಂಟಪದಲ್ಲಿ ಈಗಲೂ ಅವರ ತಲೆಗಳಂತೆ ಇರುವ ಶಿಲೆಗಳಿದ್ದು,ಅದನ್ನು ಮೇದಾರರ ಮಂಟಪವೆಂದು ಕರೆಯಲಾಗುತ್ತದೆ.ಶ್ರೀ ಗಂಗಾಧರೇಶ್ವರನು ಬಿದರಿನ ನೆಳಲಲ್ಲಿ ನೆಲೆಸಿದನೆಂಬುದರ ಗುರುತಾಗಿ ಗರ್ಭಗುಡಿಯಲ್ಲಿ ಶಿವಲಿಂಗದ ಮೇಲೆ ಈಗಲೂ ಬಿದುರಿನ ತೊಟ್ಟಿಲನ್ನು ಕಟ್ಟಲಾಗಿದೆ.


ಸುಮಾರು ೨೦೦೦ ವರ್ಷಗಳ ಪ್ರಾಚೀನ ಗುರು ಪರಂಪರೆಯನ್ನು ಹೊಂದಿರುವ ಶ್ರೀಕ್ಷೇತ್ರವು ಮಯೂರ ಗಳ ತಾಣವಾಗಿದ್ದು, “ಮಯೂರ ವನ “ಎಂದು ಕರೆಯುವರು.ಪುರಾಣದಲ್ಲಿ ಉಲ್ಲೇಖವಿರುವಂತೆ ಶ್ರೀ ಆದಿಚುಂಚನಗಿರಿ ಪೀಠವು ಸ್ಥಾಪನೆಯಾದುದು ತ್ರೇತ್ರಾಯುಗದಲ್ಲಿ ಪರಮೇಶ್ವರನೇ ಈ ಪೀಠದ ಸ್ಥಾಪಕನು. ಇಲ್ಲಿ ಸಾಕ್ಷಾತ್ ಪರಶಿವನೇ ಶ್ರೀ ಗಂಗಾಧರೇಶ್ವರ ನಾಗಿ ನೆಲೆ ನಿಂತಿದ್ದಾನೆ.


ಬಿಂದು ಸರೋವರ
ಶ್ರೀಮಠದ ದಕ್ಷಿಣ ದಿಕ್ಕಿಗೆ ಬಿಂದು ಸರೋವರವಿದೆ.ಕಂಬದಮ್ಮ ಆದಿಶಕ್ತಿಯ ಪ್ರತಿನಿಧಿಯಾದರೆ. ಇದು ಗಂಗಾದೇವಿಯ ಪ್ರತಿನಿಧಿ, ಶಿವನ ಜಡೆಯಿಂದ ಬಂದ ಗಂಗಾ ಬಿಂದುವು ಈ ಸರೋವರದಲ್ಲಿ ಸೇರಿಹೋದ ಕಾರಣ ಇದಕ್ಕೆ “ಬಿಂದು ಸರೋವರ “ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ.ಸರೋವರದಲ್ಲಿ ಸ್ನಾನ ಮಾಡಿ, ಗಂಗಾ ದೇವಿಯನ್ನು ಜಪಿಸಿದರೆ ಸಾಕು, ಸಕಲ ರೋಗಗಳು ನಿವಾರ ಣೆಯಾಗುತ್ತವೆ ಎಂಬ ಭಾವನೆ ಭಕ್ತರಲ್ಲಿ ಬೇರೂರಿದೆ.ಗಂಗಾದೇಶ್ವರ ಅಭಿಷೇಕಕ್ಕೆ ಈ ಸರೋವರದಿಂದಲೇ ಜಲವನ್ನು ತೆಗೆದುಕೊಂಡು ಹೋಗುವರು.
ಶ್ರೀ ಜ್ವಾಲಾ ಪೀಠ
ಶಿವನು ತಪಸ್ಸಿಗೆ ಕುಳಿತ ಪವಿತ್ರ ಸ್ಥಳವಿದು.ಅದೇ ಕಾರಣಕ್ಕಾಗಿ ಈ ಪೀಠಕ್ಕೆ ಜ್ವಾಲಾ ಪೀಠ (ಅಗ್ನಿ ಪೀಠ )ಎಂಬ ಹೆಸರಿದ್ದು,ಇದನ್ನು ಭಕ್ತರು “ಉರಿಗದ್ದುಗೆ “ಎಂತಲೂ ಕರೆಯುತ್ತಾರೆ. ಈಶ್ವರನಿಂದ ಸ್ಥಾಪಿತವಾದ ಪೀಠಗಳಲ್ಲಿ ಇದೇ ಮೊದಲನೆಯದಾದುದರಿಂದ ಇದಕ್ಕೆ ಆದಿಚುಂಚನಗಿರಿ ಪೀಠ ವೆಂದು ಹೆಸರು ಬಂದಿದೆ.


ಇಂದಿನಿಂದ ಜಾತ್ರಾ ಮಹೋತ್ಸವ
“ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ೧೧ರಿಂದ ೧೯ ರ ವರೆಗೆ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು,ಈ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ಕೈಂಕರ್ಯ ಸೇರಿದಂತೆ ಹಲವು ಧಾರ್ಮಿಕ ಮತ್ತು ಅಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯಲಿ ಎಂಬ ಉದ್ದೇಶದಿಂದ ಮಾರ್ಚ್ ೧೧ರ ಬೆಳಿಗ್ಗೆ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರಿಂದ ನಂದಿ ಪೂಜೆ ಹಾಗೂ ಧರ್ಮ ಧ್ವಜಾರೋಹಣ ಮಾಡುವ ಮೂಲಕ ಜಾತ್ರಾ ಮಹೋ ತ್ಸವಕ್ಕೆ ಚಾಲನೆ ನೀಡಲಾಗುವುದು. ಮಾರ್ಚ್ ೧೨ ರ ರಾತ್ರಿ ೭ ಗಂಟೆಗೆ ಸರ್ವಾಲಂಕೃತ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಉತ್ಸವ,ಮಾರ್ಚ್ ೧೩ ರಂದು ರಾತ್ರಿ ೭:೦೦ ಗಂಟೆಗೆ ಮಲ್ಲೇಶ್ವರ ಸ್ವಾಮಿ ಉತ್ಸವ ನಡೆಯಲಿದೆ. ಮಾರ್ಚ್ ೧೪ರ ಬೆಳಿಗ್ಗೆ ೯.೩೦ ಗಂಟೆಗೆ ಉಚಿತ ಸಾಮೂಹಿಕ ವಿವಾಹ,ಸಂಜೆ ೭ ಗಂಟೆಗೆ ಶ್ರೀ ಸಿದ್ದೇಶ್ವರ ಸ್ವಾಮಿ ಉತ್ಸವ ನಡೆಯಲಿದೆ. ಮಾರ್ಚ್ ೧೫ ರ ಸಂಜೆ ೭ ಗಂಟೆಗೆ ಕಾಲಭೈರವೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.


ಮಾರ್ಚ್ ೧೬ ರ ಬೆಳಿಗ್ಗೆ ೭.೩೦ ಕ್ಕೆ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಸುವರ್ಣ ಕವಚ ಅಲಂಕಾರ ಹಾಗೂ ಶ್ರೀ ಗಂಗಾಧರೇಶ್ವರ ಸ್ವಾಮಿ ಗೆ ರಜತ ನಾಗಾಭರಣ ಅಲಂಕಾರ,ಅದೇ ದಿನ ಬೆಳಗ್ಗೆ ೯.೩೦ಕ್ಕೆ ಆದಿಚುಂಚನಗಿರಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನೆ ನಡೆಯಲಿದೆ. ಸಂಜೆ ೭ ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಜ್ವಾಲಾ ಪೀಠಾರೋಹಣ, ಸಿದ್ದ ಸಿಂಹಾಸನ ಪೂಜೆ ನಡೆಯುತ್ತದೆ. ರಾತ್ರಿ ೯:೦೦ ಗಂಟೆಗೆ ಚಂದ್ರಮಂಡಲೋತ್ಸವ ಪೂಜೆ ನಡೆಯಲಿದೆ .


ಮಾರ್ಚ್ ೧೭ ರ ಬೆಳಿಗ್ಗೆ ಕ್ಷೇತ್ರಾಧಿ ದೇವತೆಗಳಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಮಹೋತ್ಸವಗಳು ನಡೆಯಲಿವೆ. ಅಂದು ಬೆಳಿಗ್ಗೆ ೧೦ ಚುಂಚನಹಳ್ಳಿ ಜೋಡಿ ರಸ್ತೆಯಿಂದ ಸಹಸ್ರಾರು ಭಕ್ತರು ಭೈರವ ಮಾಲೆ ಧರಿಸಿ ಕ್ಷೇತ್ರಕ್ಕೆ ಆಗಮಿಸುವರು.ಸಂಜೆ ೭ ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಒಂಬತ್ತಕ್ಕೆ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ,ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಂತರ ನಾಟಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.
ಮಾ ೧೮ ರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ಬಹಳ ವಿಜ್ರಂಭಣೆಯಿಂದ ಜರುಗಲಿದೆ. ನಾಡಿನಾದ್ಯಂತ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ. ಸಂಜೆ ೬:೦೦ ಗಂಟೆಗೆ ನೂರಾರು ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಗಿರಿ ಪ್ರದಕ್ಷಿಣೆ ನಡೆಯಲಿದೆ.ಬಳಿಕ ಸೋಮೇಶ್ವರ ಸ್ವಾಮಿಯ ಉತ್ಸವ ನಡೆಯಲಿದೆ. ಮಾರ್ಚ್ ೧೯ ಶ್ರೀ ರ ಬೆಳಿಗ್ಗೆ ೯ಗಂಟೆಗೆ ಕ್ಷೇತ್ರದ ಬಿಂದು ಸರೋವರದಲ್ಲಿ ಅವಭೃತ ಸ್ನಾನ ಮಹಾಭಿಷೇಕ ಮತ್ತು ಸಭಾ ಕಾರ್ಯಕ್ರಮದ ಬಳಿಕ ಧರ್ಮಧ್ವಜಾವರೋಹಣದೊಂದಿಗೆ ೯ ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.


ಇಂದಿಗೂ ಪೂಜ್ಯ ಸ್ವಾಮಿಗಳವರ ಅನುಪಸ್ಥಿತಿಯಲ್ಲಿ ಆ ಎಲ್ಲಾ ಸೇವಾ ಕಾರ್ಯಗಳು ಮುಂದುವರಿಯುತ್ತಿವೆ. ಸ್ವಾಮೀಜಿಯವರು ಇಲ್ಲದಿರಬಹುದು ಆದರೆ ಶ್ರೀಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯದ ಯಶಸ್ಸಿನ ಹಿಂದೆ ಸ್ವಾಮಿಗಳವರ ಉಪಸ್ಥಿತಿಯನ್ನು ಇಂದಿಗೂ ಕಾಣಬಹುದು
.

  • ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.೯೮೮೦೮೩೯೫೭೫

By admin

ನಿಮ್ಮದೊಂದು ಉತ್ತರ

You missed

error: Content is protected !!