ಶಿವಮೊಗ್ಗ,ಮಾ.09:
ರಾಜಕಾರಣಿ ಎಂಬುದಕ್ಕಿಂತ ಯುವ ಪಡೆಯ ಜೊತೆ ಸಾಂಸ್ಕೃತಿಕ, ಕಲಾತ್ಮಕತೆ, ಕ್ರೀಡೆ, ವಾಣಿಜ್ಯ, ಉದ್ಯಮದ ಜೊತೆ ಗುರುತಿಕೊಂಡು ವಿಧಾನಪರಿಷತ್ ಶಾಸಕರಾದ ಡಿಎಸ್ ಅರುಣ್ ಶತೃಗಳನ್ನು ಸೃಷ್ಟಿಸಿಕೊಳ್ಳದಂತಹವರು. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅವರನ್ನು ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿ ಸಂಪುಟದರ್ಜೆ ಸ್ಥಾನ ನೀಡಿತ್ತು.
ಅಂತಹವರಿಗೆ ಪಾಪಿಷ್ಟ ಮನಸಿನ ವ್ಯಕ್ತಿಯೊಬ್ಬ ಅಸಭ್ಯ ಹಾಗೂ ಅಶ್ಲೀಲವಾಗಿ ಭೆದರಿಕೆ ಕರೆ ಹಾಕಿದ್ದಾನೆ.
ಇಂತಹದೊಂದು ದೂರು ಶಿವಮೊಗ್ಗ ಸಿಎನ್ಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿ ಪತ್ತೆ ಹಾಗೂ ಬಂಧನಕ್ಕೆ ಇನ್ಸ್ ಸ್ಪೆಕ್ಟರ್ ಗುರುರಾಜ್ ಜಾಲ ಹೂಡಿದ್ದಾರೆ.
ಜಿಲ್ಲಾ ರಾಜಕಾರಣದ ಅತ್ಯಂತ ಸಜ್ಜನ ರಾಜಕಾರಣಿ ಎನಿಸಿಕೊಳ್ಳುವ ಡಿ.ಎಸ್. ಅರುಣ್ ಆರಂಭದಿಂದಲೂ ಬಿಜೆಪಿ ವಹಿಸಿದ್ದ ಕೆಲಸ ಮಾಡುತ್ತಿದ್ದರು.
ಬಜರಂಗದಳ ಕಾರ್ಯತರ್ಕ ಹರ್ಷನ ಹತ್ಯೆ ವೇಳೆ ಹೇಳಿಕೆ ನೀಡಿದ್ದ ಅರುಣ್ ಅವರಿಗೆ ಫೆ.21 ರಂದು ಮುಸ್ತಾಕ್ ಅಲಿ ಎಂಬಾತ ಬೆದರಿಕೆ ಕರೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮುಸ್ತಾಕ್ ಅಲಿ ಬೆದರಿಕೆ ಪೋಸ್ಟ್ ಹಾಕಿದ್ದಾನೆ ಎನ್ನಲಾಗಿದ್ದು, ನಿಮ್ಮ ತಲೆಯಲ್ಲಿ ಇಂದು ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ ಅಷ್ಟೆ. ಆದರೆ ಮುಂದಿನ ದಿನ ನಿಮ್ಮ ಹೆಂಡಿರು-ಮಕ್ಕಳೇ ನಮ್ಮ ಟಾರ್ಗೆಟ್ ನೆನಪಿಡಿ. ಷಂಡ ಸರ್ಕಾರದ ಭಂಡರಂತೆ ವರ್ತಿಸುವ ಪ್ರಚಂಡರೇ ಎಂದು ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಅರುಣ್ ಅವರ ಆಪ್ತ ಸಹಾಯಕ ವಾಗೀಶ್ ಅವರು, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಭದ್ರತೆ ಒದಗಿಸುವಂತೆ ಕೋರಲಾಗಿದೆ. ಅಲ್ಲದೇ, ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.