ಶಿವಮೊಗ್ಗ, ಮಾ.04:
ಸುಳ್ಳು ಜಾತಿ ಪ್ರಮಾಣ ಪತ್ರದ ನೀಡಿರುವ ಬಗ್ಗೆ ಹಲವು ಅಧಿಕಾರಿಗಳ ವಿರುದ್ದ ಪ್ರಕರಣಗಳು ದಾಖಲಾಗಿದ್ದು, ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಇಂತಹದೊಂದು ಪ್ರಕರಣ ದಾಖಲಾಗಿದೆ.
ಮೊನ್ನೆಯಷ್ಟೇ ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಂದೇ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಮತ್ತು ಗ್ರಾಮಲೆಕ್ಕಾಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.
2003-04 ರ ಸಾಲಿನಲ್ಲಿ ತಮಿಳು ಜನಾಂಗದ ಆರು ಮಂದಿ ಭೋವಿ ಜಾತಿಗೆ ಸೇರಿದವರು ಎಂದು ಹೇಳಿ ಆಗಿನ ಗ್ರಾಮಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಮತ್ತು ತಹಶೀಲ್ದಾರ್ ನಿಂದ ಪ್ರಮಾಣ ಪತ್ರ ಪಡೆದಿದ್ದರು.
ಈ ಬಗ್ಗೆ ದಾವಣಗೆರೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಹೋದ ಬೆನ್ನಲ್ಲೆ ಜಾರಿ ನಿರ್ದೇಶನಾಲಯ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.


ಜಿಲ್ಲಾಧಿಕಾರಿಗಳು ಈ ಬಗ್ಗೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನಡೆಸಿ ಪಿ. ಅಣ್ಣಮಲೈ ಬಿನ್ ಪುಂಗವನಂ, ಎಂ.ಕಾಸಿ ಬಿನ್‌ ಮನ್ನಾರ್ಬೋವಿ, ಬಂಗಾರ ಸ್ವಾಮಿ ಬಿನ್ನ ಚಿನ್ನಾಸ್ವಾಮಿ, ಬಿ.ಶೇಖರ್ ಬಿನ್ ಪೊನ್ನಸ್ವಾಮಿ, ಎ ಧರ್ಮಲಿಂಗಂ ಬಿನ್ನ ಅಣ್ಣಮಲೈ, ರಾಜಮ್ಮ ಕೋಂ ಬಂಗಾರ ಸ್ವಾಮಿ, ಇವರ ದಾಖಲಾತಿಗಳು ಪರಿಶಿಷ್ಟ ಜಾತಿ ಬೋವಿ ಸಮಾಜಕ್ಕೆ ಸೇರಿರುವ ಕುರಿತು ಸಮಂಜಸವಾಗಿಲ್ಲ ಎಂಬ ವರದಿ ನೀಡಿ ಇವರುಗಳ ಬೋವಿ ಜಾತಿಗೆ ಸೇರಿರುವ ಪ್ರಮಾಣ ಪತ್ರವನ್ನ ರದ್ದುಗೊಳಿಸಿ ಆದೇಶಕ್ಕೆ ಶಿಫಾರಸ್ಸು ನೀಡಿರುತ್ತಾರೆ.
ಅದರಂತೆ ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರು ಸುಳ್ಳು ಪ್ರಮಾಣಪತ್ರವನ್ನ ರದ್ದುಗೊಳಿಸಿ ವಿಎ, ಆರ್.ಐ ಮತ್ತು ತಹಶೀಲ್ದಾರ್ ಸೇರಿದಂತೆ ಈ ಆರು ಜನರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಫ್ಐಅರ್ ನಲ್ಲಿ ದೂರು ದಾಖಲಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!