ಶಿವಮೊಗ್ಗ,ಆ.04: ಕೊರೋನಾ ನಡುವೆಯೂ ಬ್ಯಾಂಕ್ ಹಣ ಕಟ್ಟುವಂತೆ ಪೋನ್ ಕರೆ ಮಾಡಿ ಕಾಡಿದ್ದ ಹಿನ್ನೆಲೆಯಲ್ಲಿ ಮನನೊಂದು ವ್ಯಕ್ತಿ ಹಳ್ಳಕ್ಕೆ ಹಾರಿ ಸಾವು ಕಂಡಿದ್ದಾರೆಂದು ತಿಳಿದುಬಂದಿದೆ.
ಶಿವಮೊಗ್ಗ ಸಮೀಪದ ಪುರದಾಳ್ ಗ್ರಾಮದಲ್ಲಿ ಘಟನೆ ಇದಾಗಿದೆ.
ಪದ್ಮಪ್ಪ (65)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಕಾರ್ಪೋರೇಷನ್ ಬ್ಯಾಂಕ್ ನಲ್ಲಿ 3 ಲಕ್ಷದ 50 ಸಾವಿರ ಸಾಲ ಮಾಡಿದ್ದ ರೈತ.
ಸಾಲದ ಹಣ ಪಾವತಿಸುವಂತೆ ಬ್ಯಾಂಕ್ ನಿಂದ ಪೋನ್ ಮಾಡಲಾಗಿತ್ತು.
ಸಾಲಕ್ಕೆ ಹೆದರಿ ಆತ್ಮಹತ್ಯೆ ರೈತರು ಮಾಡಿಕೊಂಡಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.