ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷ (2022-23) ಏಪ್ರಿಲ್ 9ಕ್ಕೆ ಮುಕ್ತಾಯಗೊಳ್ಳಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 10ರಿಂದ ಮೇ 15ರವರೆಗೆ ಬೇಸಿಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಮೇ 16ರಿಂದ ಮುಂ
ದಿನ ಶೈಕ್ಷಣಿಕ ವರ್ಷ (2022-23)ಆರಂಭವಾಗಲಿದೆ.
ಅಲ್ಲದೆ, ಕೋವಿಡ್ ಕಾರಣ 2019-20, 2020-21ಮತ್ತು 2021-22 ಈ ಮೂರೂ ಶೈಕಣಿಕ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದೆ ವಿದ್ಯಾರ್ಥಿಗಳಿಗೆ ಆಗಿರುವ ಕಲಿಕಾ ಕೊರತೆಯನ್ನು ಸರಿತೂಗಿಸಲು ಮುಂದಿನ ವರ್ಷ ಶೈಕ್ಷಣಿಕ ವರ್ಷದಲ್ಲಿ ’ಕಲಿಕಾ ಚೇತರಿಕೆ (ಸೇತುಬಂಧ) ಕಾರ್ಯಕ್ರಮ ಆಯೋಜಿಸಲು ಕೂಡಾ ಇಲಾಖೆ ನಿರ್ಧರಿಸಿದೆ. ಈ ಕಾರ್ಯಕ್ರಮ ಮೇ 16ರಿಂದ ಆರಂಭವಾಗಲಿದೆ.
ಪ್ರಸಕ್ತ ವರ್ಷ ಏಪ್ರಿಲ್ 9ರಂದು ಶೈಕ್ಷಣಿಕ ವರ್ಷ ಕೊನೆಗೊಳ್ಳಲಿರುವುದರಿಂದ ಪ್ರಾಥಮಿಕ ಶಾಲೆಗಳಲ್ಲಿ (1-5, 1-7 ಮತ್ತು 8ನೇ ತರಗತಿ ಇರುವ ಶಾಲೆಗಳು) ಮಾರ್ಚ್ 24ರಿಂದ ಏಪ್ರಿಲ್ 4ರವರೆಗೆ ವಾರ್ಷಿಕ ಪರೀಕ್ಷೆ ನಡೆಸಿ, ಏ. 9ರಂದು ಫಲಿತಾಂಶ ಪ್ರಕಟಿಸಬೇಕು. 8-9 ತರಗತಿಗಳಿರುವ ಪ್ರೌಢ ಶಾಲೆಗಳಲ್ಲಿ ಮಾರ್ಚ್ 21ರಿಂದ ಮಾರ್ಚ್ರ26 ವರೆಗೆ ವಿಷಯವಾರು ಪರೀಕ್ಷೆ, ಮಾ.29 ಭಾಗ-2 ( ದೈಹಿಕ ಶಿಕ್ಷಣ, ಇತರ) ಪರೀಕ್ಷೆ ನಡೆಸಿ, ಏಪ್ರಿಲ್ 7ರಂದು ಫಲಿತಾಂಶ ಪ್ರಕಟಿಸಬೇಕು ಎಂದು ಇಲಾಖೆ ಸೂಚಿಸಿದೆ.
ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮೇ 29ರಿಂದ ಆರಂಭವಾಗಿ ಏಪ್ರಿಲ್ 10ಕ್ಕೆ ಮುಕ್ತಾಯವಾಗುತ್ತದೆ.