ನಾಡಿನ ದೊರೆ, ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಬೆಂಗಳೂರಿನ ಪೊಲೀಸ್ ಕಮಿಷನರ್ ಕಮಲ್ ಪಂತ್, ಮುಖ್ಯಮಂತ್ರಿಗಳ ಪುತ್ರ ಬಿಜೆಪಿ ರಾಜ್ಯ ಸಮಿತಿ ಪ್ರಮುಖರಾದ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಸಿಬ್ಬಂದಿಗಳು ಸಹ ಕ್ವಾರಂಟೈನ್ ಗೆ ಒಳಗಾಗಿದ್ದು ಅದರಲ್ಲಿ ಅದರಲ್ಲಿ ಆರು ಮಂದಿಗೆ ಪಾಸಿಟಿವ್ ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.
ನಾಡಿನ ದೊರೆಗೆ ಕಾಣಿಸಿಕೊಂಡ ಕೊರೋನಾ ಕಂಟಕದ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಯ ಎಲ್ಲ ವಿಭಾಗಗಳಲ್ಲಿ ಕರೋನಾ ನಿಯಂತ್ರಣಕ್ಕಾಗಿ ತನ್ನದೇ ಆದ ಕಾರ್ಯನಿರ್ವಹಣೆಗೆ ಸೂಚಿಸಲಾಗಿದ್ದು, ಪ್ರಾಥಮಿಕ ಸಂಪರ್ಕ ದವರು ಕ್ವಾರಂಟೈನ್ ನಲ್ಲಿರಲು ನಿರ್ಧರಿಸಿದ್ದಾರೆ
ರಾಜ್ಯದ ಇತಿಹಾಸ ಇಂತಹ ದಾದರೆ, ದೇಶವ್ಯಾಪಿ ಕೊರೊನಾ ಕಂಟಕ ಮಿತಿಮೀರುತ್ತಿದೆ. ಕೇಂದ್ರ ಸಚಿವರನ್ನು ಬಿಡದೇ, ಓರ್ವ ಸಚಿವೆಯ ಸಾವಿಗೆ ಕಾರಣವಾಗಿರುವ ಕೊರೊನಾ ಮತ್ತೊಂದೆಡೆ ರಾಜ್ಯಪಾಲರು ಕೊರೋನಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಿತಿಮೀರುತ್ತಿರುವುದನ್ನು ತಪ್ಪಿಸಲು ಕ್ವಾರಂಟೈನ್ ಅನುಸರಿಸುವಂತೆ ಸೂಚಿಸಲಾಗಿದೆ.
ನಾಡಿನ ದೊರೆ ಬಿಎಸ್ ಯಡಿಯೂರಪ್ಪ ಹಾಗೂ ಸಚಿವರು ಮತ್ತು ಅಧಿಕಾರಿಗಳು ನೌಕರರು ಎಲ್ಲರೂ ಕ್ವಾರಂಟೈನ್ ಸಹಕಾರದಿಂದ ಬೇಗ ಗುಣಮುಖರಾಗಿ ಹೊರಬರಲಿ ಎಂದು ಪ್ರಮುಖರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!