ಶಿವಮೊಗ್ಗ : ನಮಗೆ ಪರೀಕ್ಷೆ ಮುಖ್ಯ ಅಲ್ಲ, ಧರ್ಮವೇ ಮುಖ್ಯ ಎಂದು ಶಿಕಾರಿಪುರ ತಾಲೂಕಿನ ಮೌಲನಾ ಅಜಾದ್ ಶಾಲೆಯಲ್ಲಿ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯನ್ನು ಬಹಿಷ್ಕರಿಸಿರುವ ಘಟನೆ ವರದಿಯಾಗಿದೆ.
ವಿದ್ಯಾರ್ಥಿನಿಯೊರ್ವರು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ, ಶಾಲೆಯ ಶಿಕ್ಷಕರು ನಮಗೆ ಹಿಜಾಬ್ ತೆಗೆದು ಒಂದು ರೂಂನಲ್ಲಿ ಪರೀಕ್ಷೆ ಬರೆಯಲು ಹೇಳಿದ್ದರು. ಅದಕ್ಕೆ ನಾವು ಒಪ್ಪದ ಕಾರಣ ನಮ್ಮನ್ನು ಮನೆಗೆ ಕಳುಹಿಸಿದರು ಎಂದು ಹೇಳಿದ್ದಾರೆ.
ಏನಾದ್ರು ಆಗ್ಲಿ ನಾವು ಹಿಜಾಬ್ ತೆಗೆಯಲ್ಲ. ಮೊದಲು ನಾವು ಹೇಗೆ ಹಿಜಾಬ್ ಹಾಕಿಕೊಂಡು ಹೋಗುತ್ತಿದ್ದೇವು ಹಾಗೆಯೇ ಬಿಟ್ಟರೆ ನಾವು ಪರೀಕ್ಷೆ ಬರೆಯುತ್ತವೆ. ಮನೆಯಲ್ಲಿ ಅಪ್ಪ, ಅಮ್ಮ ಹೇಳಿದ್ದಾರೆ. ಹಿಜಾಬ್ ನಮ್ಮ ಹಕ್ಕು ಅದನ್ನು ತೆಗೆದು ಬರೋದಿಲ್ಲ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿಂದು 32 ವಿದ್ಯಾರ್ಥಿನಿಯರು ಪರೀಕ್ಷೆಯಿಂದ ವಾಪಾಸ್ ಆಗಿದ್ದಾರೆ. ಶಿವಮೊಗ್ಗದ ಮೈನ್ ಮಿಡ್ಲ್ ಸ್ಕೂಲ್‌ನಲ್ಲಿ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ ನಡೆಸಿದ್ದು, ಪರೀಕ್ಷೆ ಬಹಿಷ್ಕರಿಸಿದ 13 ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ
.

By admin

ನಿಮ್ಮದೊಂದು ಉತ್ತರ

error: Content is protected !!