ಶಿವಮೊಗ್ಗ,ಆ.1:
ಅದೇನು ಗ್ರಹಚಾರವೋ ಗೊತ್ತಿಲ್ಲ. ಈ ಕರಾಳ ಕೊರೊನಾ ಮುಖ್ಯ ಮುಖ್ಯ ಕಛೇರಿ, ಮನೆಬಾಗಿಲು, ಸಮಾಜ ಸೇವಕರ ಮನೆಯಂಗಳದಲ್ಲೇ ಸುಳಿದಾಡುತ್ತಿದೆ. ಯಾರನ್ನ ಮಾತಾಡಿಸಬೇಕು…? ಯಾರ ಜೊತೆ ಇರಬೇಕು ಎಂಬುದೇ ಅರ್ಥವಾಗುತ್ತಿಲ್ಲ.
ಏನೂ ಇಲ್ಲದವರು ಏನೇನೋ ಆಗುತ್ತಿದ್ದಾರೆ. ಪರಸ್ಪರ ಪ್ರೀತಿ ವಿಶ್ವಾಸ ಹಾಳು ಮಾಡುತ್ತಿರುವ ಕೊರೊನಾ ಇಂದು ಮತ್ತೆ ನಮ್ಮ ಶಿವಮೊಗ್ಗದ ಜನಾನುರಾಗಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಸಚಿವರ ಕಛೇರಿಗೂ ಬೆನ್ನತ್ತಿದೆ.
ಸದಾ ಶಿವಮೊಗ್ಗ ಜಿಲ್ಲೆಯಷ್ಟಕ್ಕೆ ಸೀಮಿತವಾಗದೇ ರಾಜ್ಯವ್ಯಾಪಿ ಸುತ್ತಾಡುವ ಸಚಿವ ಈಶ್ವರಪ್ಪ ಅವರ ಕಛೇರಿಯ ಕಟ್ಟಡಕ್ಕೆ ಮತ್ತೆ ಈಗ ಬೀಗ ಬಿದ್ದಿದೆ.
ವಿವರ: ಕೊರೋನ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಸಚಿವರ ಕಚೇರಿ ಸೇರಿದಂತೆ ಇಡೀ ಕಟ್ಡಡವನ್ನು ಎರಡು ದಿನಗಳ ವರೆಗೆ ಬಂದ್ ಮಾಡಲಾಗಿದೆ.
ನಗರದ ನೆಹರು ರಸ್ತೆಯಲ್ಲಿರುವ ಸಚಿವರ ಕಚೇರಿಯ ಟೈಪಿಸ್ಟ್ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕಚೇರಿಯನ್ನ ಸೋಮವಾರದ ವರೆಗೂ ಸ್ಯಾನಿಟೈಜರ್ ಗಾಗಿ ಬಂದ್ ಮಾಡಲಾಗುತ್ತಿದೆ.
ಸಚಿವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸೋಂಕಿತ ವ್ಯಕ್ತಿ ಅನಾರೋಗ್ಯದ ಕಾರಣ ಕಳೆದ ಮೂರು ದಿನದಿಂದ ಕಚೇರಿಗೆ ಬಂದಿಲ್ಲ. ಇಂದು ಕೊರೊನಾ ಸೋಂಕು ದೃಢ ಹಿನ್ನೆಲೆ ಸಚಿವರ ಕಚೇರಿಯನ್ನ ಎರಡು ದಿನ ಬಂದ್ ಮಾಡಲಾಗುತ್ತಿದೆ.
ಎಸ್.ಕೆ.ಗಜೇಂದ್ರ ಸ್ವಾಮಿ