ತೀರ್ಥಹಳ್ಳಿ: ತಾಲ್ಲೂಕಿನ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌರಿಹಕ್ಕಲು ಗ್ರಾಮದಲ್ಲಿ ಅಡಿಕೆ ಕಳವು ಮಾಡಿದ್ದ ಆರೋಪಿಯನ್ನು ಆಗುಂಬೆ ಪೊಲೀಸರು ಬಂಧಿಸಿದ್ದಾರೆ.
ಕೌರಿಹಕ್ಕಲು ಗ್ರಾಮದ ಸುಧಾಕರ ಬಂಧಿತ ಆರೋಪಿ. 60 ಸಾವಿರ ಮೌಲ್ಯದ ಒಂದೂವರೆ ಕ್ವಿಂಟಲ್ ಅಡಿಕೆಯನ್ನು ಕಳವು ಮಾಡಿದ್ದ.
ಡಿವೈಎಸ್ಪಿ ಶಾಂತವೀರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್, ಆಗುಂಬೆ ಪಿಎಸ್‌ಐ ಶಿವಕುಮಾರ್, ಪೊಲೀಸ್ ಸಿಬ್ಬಂದಿಯಾದ ವೀರೇಂದ್ರ, ಸುದರ್ಶನ, ಆದರ್ಶ, ಮಂಜುನಾಥ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.