ಶಿವಮೊಗ್ಗ, ಜು.30 : ಶಿವಮೊಗ್ಗ ದೊಡ್ಡ ಪೇಟೆ ಪೊಲೀಸರಿಗೆ ಅಧಿಕಾರಿಗಳ ಕಾಳಜಿ ನಡುವೆ ಬಿಟ್ಟೂ ಬಿಡದೇ ವಕ್ಕರಿಸುತ್ತಿರುವ ಕೊರೊನಾ ಕಿರಿಕ್ ನಡುವೆ ಮತ್ತೊಂದು ದುರಂತದ ಘಟನೆ.
ಪೊಲೀಸ್ ಇಲಾಖೆಗೂ ಕೊರೋನಕ್ಕೂ ಏನೋ ಬಾವ ಮೈದುನ ಸಂಬಂಧದಂತೆ ಅನುಮಾನ ವ್ಯಕ್ತವಾಗುತ್ತಿದೆ.
ಕಾನೂನು ವ್ಯವಸ್ಥೆಯೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಆರೋಗ್ಯ, ಪೊಲೀಸ್ ಇಲಾಖೆಯವರು ಯೋಚಿಸಬೇಕಿದೆ. ಇದರ ನಡುವೆ ಪತ್ರಕರ್ತರೂ ಸೇರಿದ್ದಾರೆ. ಅತಿಹೆಚ್ಚು ಸೋಂಕಿಗೆ ತುತ್ತಾಗುತ್ತಿರುವ ಅಧಿಕಾರಿ, ನೌಕರರ ನಡುವೆ ಎಚ್ಚರ ಅತ್ಯಗತ್ಯ.
ದೊಡ್ಡಪೇಟೆಯ ಪೊಲೀಸ್ ಠಾಣೆ ಈ ಸೋಂಕಿನಿಂದ ಗಂಭೀರವಾಗಿ ತುತ್ತಾಗಿದೆ. ಅಪರಾಧಿಗಳನ್ನ ಹಿಡಿದು ಹೆಡೆಮುರಿ ಕಟ್ಟುವಷ್ಟರಲ್ಲಿ ಈ ಕೊರೋನ ವೈರಸ್ ದೊಡ್ಡಪೇಟೆ ಠಾಣೆಯವರನ್ನ ಹೈರಾಣು ಮಾಡಿಬಿಟ್ಟಿದೆ ಎಂದರೆ ಮತ್ತೆ ಇಂದಿನ ವಿಷಯದಲ್ಲಿ ತಪ್ಪಾಗಲಾರದು,
ನಿನ್ನೆ ಲಯನ್ ಸಫಾರಿ ಸಮೀಪದ ಮುತ್ತಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಕೊಳೆಸ್ಥಿತಿಯಲ್ಲಿ ದಸ್ತಗಿರ್ ಎಂಬ 38 ವರ್ಷದ ವ್ಯಕ್ತಿಯ ಶವ ದೊರೆತಿದ್ದು, ಈತನನ್ನ ಕೊಲೆಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ದಸ್ತಗಿರ್ ನಾಪತ್ತೆಯಾಗಿರುವ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನ ಬೇಧಿಸಿದ ದೊಡ್ಡಪೇಟೆ ಪೊಲೀಸರು ತಲೆ ತಪ್ಪಿಸಿಕೊಂಡಿದ್ದ ಆರೋಪಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದರಲ್ಲಿ ಇಬ್ಬರು ಆರೋಪಿಗಳಿಗೆ ಇಂದು ಬೆಳಿಗ್ಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವತ್ತು ಸಂಜೆ ಈ ಇಬ್ಬರೂ ಆರೋಪಿಗಳಿಗೆ ಕೊರೋನ ಪಾಸಿಟಿವ್ ಎಂದು ವರದಿ ಬಂದಿದೆ.
ಇಂತಹ ಎರಡೋ ಅಥವಾ ಮೂರನೇ ಬಾರಿಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಆರೋಪಿಗಳಿಗೆ ಕೊರೋನ ಪಾಸಿಟಿವ್ ವರದಿ ಬಂದಿರುವುದು ತಿಳಿದುಬಂದಿದೆ. ಇದರಿಂದಾಗಿ ಈ ಬಾರಿ ಕೊರೋನ ಪಾಸಿಟಿವ್ ಸತತವಾಗಿ ಕಾಣಿಸಿಕೊಂಡ ಬೆನ್ನಲ್ಲೇ ಠಾಣೆಯನ್ನ ಸ್ಯಾನಿಟೈಜ್ ಮಾಡಲಾಗುತ್ತದೋ ಅಥವಾ ಸೀಲ್ ಡೌನ್ ಮಾಡಲಾಗುತ್ತಿದೆಯೋ ಕಾದುನೋಡಬೇಕಿದೆ. ಆರೋಪಿಗಳನ್ನ ಹಿಡಿದು ತಂದ ಪೊಲೀಸರನ್ನ ಪ್ರಾಥಮಿಕ ಸಂಪರ್ಕವೆಂದು ಪರಿಗಣಿಸಿದರೆ ಇವರೆಲ್ಲಾ 14 ದಿನಗಳ ಕ್ವಾರಂಟೈನ್ ಗೆ ಒಳಬೇಕಾಗುತ್ತದೆಯೋ ಇದನ್ನೂ ಸಹ ಕಾದುನೋಡಬೇಕಿದೆ. ಒಟ್ಟಿನಲ್ಲಿ ವೈರಸ್ ನಿಂದ ಇಲಾಖೆ ಅದರಲ್ಲೂ ದೊಡ್ಡಪೇಟೆ ಪೊಲೀಸ್ ಠಾಣೆ ಹೈರಣಾಗಿರುವುದು ಮಾತ್ರ ಖಚಿತ!
ಅಧಿಕಾರಿಗಳ ಶ್ರಮ ಇಲ್ಲಿ ಗೌಣವಾಗುತ್ತಿರುವುದು ದುರಂತ…!