
ಶಿವಮೊಗ್ಗ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲದೆ ಇದ್ದರೂ ಸಹ ರಾಜ್ಯದ ಪ್ರತಿಯೊಬ್ಬ ಅಭಿಮಾನಿಗಳಲ್ಲಿ ಬೆರತು ಹೋಗಿದ್ದಾರೆ.
ಅಪ್ಪು ಅವರು ನಟನೆಯ ಜೊತೆಗೆ ಸಾಮಾಜಿಕ ಕೆಲಸಗಳು, ಅಭಿಮಾನಿಗಳೊಂದಿಗೆ ಇರುತ್ತಿದ್ದ ರೀತಿ ಎಲ್ಲವೂ ಮಾದರಿ.
ಕರ್ನಾಟಕ ರಾಜರತ್ನ ಪುನೀತ್ ರಾಜ್ ಕುಮಾರ್ ಅವರನ್ನು ಜನ ಇಂದಿಗೂ ಆರಾಧನೆ ಮಾಡುತ್ತಲೇ ಬಂದಿದ್ದಾರೆ.
ವಿಶೇಷವೆಂದರೆ ಶಿವಮೊಗ್ಗದ ಕೇಸರಿ ಹಿಂದೂ ಯುವಕರ ಸಂಘದ ಪುನೀತ್ ಅಭಿಮಾನಿಗಳು ಪುನೀತ್ ಭಾವಚಿತ್ರದೊಂದಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ.
ಇದೇ ವೇಳೆ ಮಾರ್ಗ ಮಧ್ಯೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪುನೀತ್ ಭಾವಚಿತ್ರಕ್ಕೆ ನಮಸ್ಕರಿಸುವ ಜೊತೆಗೆ ಜಯಘೋಷ ಹಾಕುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಶಿವಮೊಗ್ಗ ನಗರದ ಬಿ.ಬಿ.ರಸ್ತೆಯ ಅಭಿಷೇಕ್, ಅಂಜನ್, ಅಮ್ಮನ್, ಕುಶಾಲ್ ಹರ್ಷಿತ್, ಪ್ರಸಾದ್, ಜಾದವ್, ಪ್ರದೀಪ್, ಆಕಾಶ್, ಕುಮಾರ್, ಪ್ರಜ್ವಲ್ ಅಪ್ಪು ಭಾವಚಿತ್ರದೊಂದಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ.