ಶಿವಮೊಗ್ಗ: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಯಲ್ಲಿ ಆಯ್ಕೆಯಾದ ಶಿವಮೊಗ್ಗದ ಡಿ.ಎಸ್. ಅರುಣ್, ದಕ್ಷಿಣ ಕನ್ನಡದ ಮಂಜುನಾಥ್ ಬಂಡಾರಿ ಸೇರಿದಂತೆ ಎಲ್ಲಾ ನೂತನ ಸದಸ್ಯರು ಇಂದು ವಿಧಾನಪರಿಷತ್‌ನಲ್ಲಿ ನಡೆದ ಸಮಾರಂಭ ದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಡಿ.ಎಸ್.ಅರುಣ್ ಅವರು ವಿಜಯಶಾಲಿಯಾಗಿದ್ದು, ದಕ್ಷಿಣ ಕನ್ನಡದಲ್ಲಿ ಶಿವಮೊಗ್ಗ ಮೂಲದ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕ ಮಂಜುನಾಥ್ ಬಂಡಾರಿ ಅವರು ಜಯಶಾಲಿಯಾಗಿದ್ದರು.


ವಿಧಾನಪರಿಷತ್‌ಗೆ ಆಯ್ಕೆಯಾದ ಈ ಶಾಸಕದ್ವಯರು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!