ಭದ್ರಾವತಿ, ಜ.04:
ಇಲ್ಲಿನ ನ್ಯೂಟೌನ್ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ 16 ರಿಂದ 29 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಮತ್ತು ಶಾಲೆ ಬಿಟ್ಟ ಮತ್ತು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಹೆಣ್ಣುಮಕ್ಕಳಿಗೆ ಕೌಶಲ್ಯಾಧಾರಿತ ಉಚಿತ ಡೇಟಾ ಎಂಟ್ರಿ ಮತ್ತು ಬ್ಯೂಟಿಷಿಯನ್ ತರಬೇತಿ ನೀಡುವ ಕಾರ್ಯಕ್ರಮ ಆರಂಭಗೊಂಡಿದೆ.


ಸರ್ವ ಶಿಕ್ಷಣ ಕರ್ನಾಟಕ (SSK)ಶಿವಮೊಗ್ಗದ DYPC ಗಣಪತಿ, ಹಾಗೂ DYPC ಉಮಾಮಹೇಶ್ವರ್ ಮತ್ತು ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ T. N ಸೋಮಶೇಖರಯ್ಯ ಇವರು ಸಾವಿತ್ರಿಬಾಯಿ ಫುಲೆ ರವರ ಜನ್ಮದಿನಾಚಾರಣೆ ಸುದಿನದಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರು, ತರಬೇತಿಗಾಗಿ ಆಗಮಿಸಿದ ಸಾರ್ವಜನಿಕರು, ಅಭ್ಯರ್ಥಿಗಳು ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಉಪಪ್ರಾಚಾರ್ಯರಾದ ಸುಮನ T. S ಅವರು ಮಾತನಾಡಿ ಇಂತಹ ಸರ್ಟಿಫಿಕೇಟ್ ಸಹಿತ ಉಚಿತ ತರಬೇತಿ ಯನ್ನು ಅಗತ್ಯವಿರುವ ಹೆಣ್ಣುಮಕ್ಕಳು ಪಡೆದುಕೊಂಡು ಬ್ಯೂಟಿ parlour ಮತ್ತು IT ಹಬ್ ಗಳಲ್ಲಿ ಡೇಟಾ ಎಂಟ್ರಿ ಆಪರೇಟರ್ಸ್ ಆಗಿ ಸ್ವಾವಲಂಬಿಯಾಗಿ ಬದುಕಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸೇರುವ ಮೂಲಕ ಇದರ ಪ್ರಯೋಜನ ಪಡೆಯಲು ಕೋರಿದರು.

By admin

ನಿಮ್ಮದೊಂದು ಉತ್ತರ

error: Content is protected !!