ಶಿವಮೊಗ್ಗದ ಪ್ರತಿಷ್ಟಿತ ನೃತ್ಯ ಸಂಸ್ಥೆಯಾದ ಸ್ಟೈಲ್ ಡಾನ್ಸ್ ಗ್ರೂಪ್ ಶಿವಮೊಗ್ಗ ನೃತ್ಯ ಸಂಸ್ಥೆಯು ಹೊಸ ವರ್ಷದ ಸಂಭ್ರಮಾಚರಣೆಗಾಗಿ ಕೃಷ್ಣಲವ್ವಾಷ್ಟಮಿ ಎಂಬ ಆಲ್ಬಂ ವೀಡಿಯೋ ಸಾಂಗಿನ ಟ್ರೇಲರ್ ಅನ್ನು “ಸ್ಟೈಲ್ ಡಾನ್ಸ್ ಗ್ರೂಪ್ ಶಿವಮೊಗ್ಗ” ಯೂಟ್ಯೂಬಿನಲ್ಲಿ 31 ಡಿಸೆಂಬರ್ 2021 ,ರಾತ್ರಿ 11ಕ್ಕೆ ಬಿಡುಗಡೆಯಾಗಿದೆ. ಈ ಹಾಡು ಶಿವರಾಜ್ ಕುಮಾರ್ ಅವರ ಹಳೆಯ ಚಿತ್ರಗೀತೆಯಾಗಿದ್ದು ಇದರಲ್ಲಿ ಮುಖ್ಯ ಭೂಮಿಕೆಯಲ್ಲಿ ಲಹರಿ ಮತ್ತು ಸಾಥ್ವಿಕ್ ಇಬ್ಬರು ನೃತ್ಯ ವಿದ್ಯಾರ್ಥಿಗಳನ್ನೆ ಬಳಸಿಕೊಂಡು ಹೊಸ ಮಾದರಿಯ ನೃತ್ಯ ನಿರ್ದೇಶನವನ್ನ ಮಾಡಿರುವುದು ಸಂಸ್ಥೆ ವಿಶೇಷ. ಈ ವೀಡಿಯೋವನ್ನ ತಪ್ಪದೆ ಸಾರ್ವಜನಿಕರು ನೋಡಿ ಹಾರೈಸಬೇಕೆಂದು ಸಂಸ್ಥಾಪಕರಾದ ಶಶಿಕುಮಾರ್ ತಿಳಿಸಿದ್ದಾರೆ.