ಶಿವಮೊಗ್ಗ, ಜು.22: ನಿನ್ನೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯಾದ್ಯಂತ ಲಾಕ್ ಡೌನ್ ಇರೊಲ್ಲ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಹಾಫ್ ಡೇ ಲಾಕ್ ಡೌನ್ ನ್ನ ರದ್ದುಗೊಳಿಸಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಹಾಗೆಯೇ ನಾಳೆಯಿಂದ ಶಿವಮೊಗ್ಗ ನಗರದ 7 ವಾರ್ಡ್ ಗಳಲ್ಲಿ ಸೀಲ್ ಡೌನ್ ಜಾರಿಗೊಳ್ಳಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಇಂದು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆಯಿಂದ ಜು.29 ರವೆಗೆ  ವಾರ್ಡ್ ನಂಬರ್ 12, 13, 22,23,29,30, 33 ರಲ್ಲಿ ಸೀಲ್ ಡೌನ್ ಜಾರಿಗೊಳ್ಳಲಿದೆ. 
ಬೆಕ್ಕಿನ ಕಲ್ಮಠ, ಎಎ ವೃತ್ತ, ಬಸ್ ನಿಲ್ದಾಣ, ಹಾಗೂ ಹೊಸ ತುಂಗ ಸೇತುವೆ ಒಳಗೆ ಬರುವ ಈ 7 ವಾರ್ಡ್ ಗಳು ಸೀಲ್ ಡೌನ್ ಇರುತ್ತದೆ. 12, 13, 33 ವಾರ್ಡ್ ಗಳಲ್ಲಿ ಭಾಗಶ ಜಾಗವನ್ನ ಸೀಲ್ ಡೌನ್ ಆಗಲಿದ್ದು, 22,23,29,30 ವಾರ್ಡ್ ಗಳು ಫುಲ್ ಸೀಲ್ ಡೌನ್ ಇರುತ್ತದೆ ಎಂದು ಸಚಿವರು ತಿಳಿಸಿದರು. 
ಬಸ್ ನಿಲ್ದಾಣ ಸೀಲ್ ಡೌನ್ ಇಲ್ಲ ಆದರೆ ಈ ವಾರ್ಡ್ ಗಳಲ್ಲಿ ಡಿಹೆಚ್ ಒ, ಕೃಷಿ ಇಲಾಖೆ, ಪೋಸ್ಟ್ ಆಫೀಸ್ ಮೊದಲಾದ ಸರ್ಕಾರಿ ಕಚೇರಿಯ ನೌಕರರಿಗೆ ಓಡಾಡಲು ಅವಕಾಶವಿರುತ್ತದೆ. ತರಕಾರಿ, ಹಣ್ಣು ಮಾರಾಟ ಬೆಳಿಗ್ಗೆ 5 ರಿಂದ 10 ರ ವರೆಗೆ ಮಾತ್ರ ಅವಕಾಶವಿದೆ ಎಂದು ಸ್ಪಷ್ಠಪಡಿಸಿದ್ದಾರೆ.
ಲಾಕ್ ಡೌನ್ ಇಂದಿನಿಂದ ರಿಲ್ಯಾಕ್ಸ್ ಇರಲಿದ್ದು, ರಾತ್ರಿ 9 ರಿಂದ  ಬೆಳಿಗ್ಗೆ 5 ಗಂಟೆಯ ವರೆಗೆ ಲಾಕ್ ಡೌನ್ ಇರುತ್ತದೆ. ಒಂದು ವಾರದಿಂದ ಜಾರಿಯಲ್ಲಿದ್ದ  ಹಾಫ್ ಲಾಕ್ ಡೌನ್ ಜಾರಿಯಲ್ಲಿರುವುದಿಲ್ಲ. ಆದರೂ ಜನ ನಿಯಮ ಪಾಲಿಸಲು ಕರೆ ನೀಡಿದರು.

By admin

ನಿಮ್ಮದೊಂದು ಉತ್ತರ

error: Content is protected !!