ಶಿವಮೊಗ್ಗ: ಹೊಸನಗರ ತಾಲ್ಲೂಕು ಸಂಪೆಕಟ್ಟೆ ಕೊಡಚಾದ್ರಿ ತೌಡಗುಳಿ ಸರ್ಕಲ್ ಬಳಿ ಅಕ್ರಮ ಮದ್ಯವನ್ನು ಶೇಖರಣೆ ಮಾಡಿದ 7.56 ಲೀಟರ್ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಆಯುಕ್ತರು, ಬೆಂಗಳೂರು ಉಪ ಆಯುಕ್ತರು, ಹೊಸನಗರ ಅಬಕಾರಿ ಇನ್ಸ್ಪೇಕ್ಟರ್ ಸಯ್ಯದ್ ತಫ್ಜಿಲ್ ಉಲ್ಲಾರವರ ಮಾರ್ಗದರ್ಶನದಲ್ಲಿ ಅಬಕಾರಿ ಇನ್ಸ್ಪೇಕ್ಟರ್ ಅಣ್ಣಪ್ಪ, ಗಜೇಂದ್ರಪ್ಪ, ಪಾಂಡು ಅಂಬಳಗೋಡ ಹಾಗೂ ಜೀಪ್ ಡೈವರ್ ಉಮೆಶ್ ಅವರನ್ನೊಳಗೊಂಡ ತಂಡ ದಾಳಿ ನಡೆಸಿದೆ.
ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆಗಾಗಿ ಆಕ್ರಮ ಮದ್ಯ ಶೇಖರಣೆ ಮಾಡಿ ಇಟ್ಟದ್ದರೆಂದು ಹೇಳಲಾಗಿದ್ದು, ಅದಿತ್ಯ ಬಿನ್ ಉಮೇಶ್ ಎಂಬುವವರು vಲೆ ಮರಿಸಿಕೊಂಡಿದ್ದು ಇವರ ವಿರುದ್ಧ ಕೇಸು ದಾಖಲಿಸಿದ್ದಾರೆ.