ಶಿವಮೊಗ್ಗ: ತಾಲೂಕಿನ ಚೋರಡಿ ಬಳಿಯ ಹೆಗ್ಗೆನಕೆರೆಯ ಬಳಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳಲು ಯತ್ನಿಸಿರುವ ಘಟನೆ ವರದಿಯಾಗಿದೆ.
ಮೂಲತಃ ಶ್ರೀನಿವಾಸ್ (23) ಹಾಗೂ 21 ವರ್ಷದ ಯುವತಿ ರಾಮನಗರದವರೆನ್ನಲಾಗಿದೆ. ಇವರಿಬ್ಬರು ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದು, ಪ್ರೀತಿ ಮನೆಯವರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ವಿಷ ಸೇವಿಸಿದ್ದಾರೆನ್ನಲಾಗಿದೆ.