ಶಿವಮೊಗ್ಗ, ಜು.21:
ದಿನದ ಅರ್ಧಭಾಗ ಲಾಕ್ ಡೌನ್ ವ್ಯವಸ್ಥೆಯಲ್ಲಿರುವ ಶಿವಮೊಗ್ಗದ ಹಲವು ಪ್ರದೇಶಗಳಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಲು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.
ನಗರದ ಹಳೆ ಪ್ರದೇಶಗಳಲ್ಲಿ ಕೊರೊನಾ ಹೆಚ್ಚುತ್ತಿರುವುದರಿಂದ ಆಯ್ದ ವಾರ್ಡುಗಳಲ್ಲಿ ಪೂರ್ಣ ಮತ್ತು ಕೆಲವು ವಾರ್ಡ್ ಗಳಲ್ಲಿ ಭಾಗಶಃ ಲಾಕ್ ಡೌನ್ ವಿಧಿಸಿ ಪಾಲಿಕೆ ಆಯುಕ್ತರು ನಿನ್ನೆ ತಡಸಂಜೆ ಆದೇಶ ಹೊರಡಿಸಿದ್ದಾರೆ.
ವಾರ್ಡ್ 12, 13, 33 ರಲ್ಲಿ ಭಾಗಶಃ ಲಾಕ್ ಡೌನ್ ಇರಲಿದೆ.
ವಾರ್ಡ್ 22, 23, 26 ಹಾಗೂ 30 ರಲ್ಲಿ ಪೂರ್ಣ ಪ್ರಮಾಣದ ಲಾಕ್ ಡೌನ್ ಹೇರಲಾಗುವುದು.
ಈ ಲಾಕ್ ಡೌನ್ 23ರಿಂದ 30 ರವರೆಗೆ ಜಾರಿಯಲ್ಲಿರುತ್ತ ದೆ.
ಹಾಲು, ಔಷಧ ಅಂಗಡಿ, ಆಸ್ಪತ್ರೆಗಳಿಗೆ ವಿನಾಯತಿ ಇರುತ್ತದೆ. ತರಕಾರಿ, ಹಣ್ಣು ಮತ್ತು ದಿನಸಿ ಅಂಗಡಿಗಳು ಬೆಳಿಗ್ಗೆ 5 ರಿಂದ 10ರವರೆಗೆ ಮಾತ್ರ ದೈನಂದಿನ ವಸ್ತುಗಳ ವಹಿವಾಟು ನಡೆಸಬೇಕು.
23ರ ಬೆಳಿಗ್ಗೆ 5ಗಂಟೆಯಿಂದ 30ರ ಬೆಳಿಗ್ಗೆ 5 ಗಂಟೆಯವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ.
ಸಂಪೂರ್ಣ ಲಾಕ್ಡೌನ್
ಹೊಸ ಆದೇಶದನ್ವಯ ಗಾಂಧಿಬಜಾರ್ ಪಶ್ಚಿಮ ಹಾಗೂ ಪೂರ್ವ, ಅಜಾದ್ ನಗರ, ಸೀಗೆಹಟ್ಟಿ, ಟ್ಯಾಂಕ್ ಮೊಹಲ್ಲಾ, ಶಿವಪ್ಪನಾಯಕ ಅರಮನೆ, ಸವಾಯಿ ಪಾಳ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿ ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಆದೇಶಿಸಿದ್ದಾರೆ.
ಅಮೀರ್ ಅಹಮದ್ ವೃತ್ತ, ಬಸ್ಟಾಂಡ್ ಬಳಿಯ ಅಶೋಕ ಅರ್ಕಲ್, ಬಿಹೆಚ್ ರಸ್ತೆ, ಬೆಕ್ಕಿನಕಲ್ಮಠ ಸರ್ಕಲ್ ಸಂಪೂರ್ಣ ಲಾಕ್ ಡೌನಾಗಲಿವೆ.

By admin

ನಿಮ್ಮದೊಂದು ಉತ್ತರ

error: Content is protected !!