ಶಿವಮೊಗ್ಗ, ಜು.18: ನಿತ್ಯ ನಿರಂತರ ನಮ್ಮ ರಕ್ಷಣೆಗೆ ಬಡಿದಟಡುವ ಪೊಲೀಸರೂ ಕೊರೊನಾ ಸೊಂಕಿನೊಳಗೆ ಸಿಲುಕಿಕೊಳ್ಳುತ್ತಿರುವುದು ದುರಂತದ ಸಂಗತಿ.
ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಇಬ್ಬರಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದೆ ಎಂದು ನಿಖರ ಮೂಲಗಳು ಹೇಳಿವೆ.
ದೊಡ್ಡಪೇಟೆ ಠಾಣೆಯ ಎಎಸ್ಐ ಹಾಗೂ ಹೆಡ್ ಕಾನ್ಸ್ ಸ್ಟೇಬಲ್ ಇಬ್ಬರಿಗೆ ಇಂದು ಕೊರೊನಾ ಸೊಂಕು ಕಾಣಿಸಿಕೊಂಡಿದೆ ಎಂದು ಇದೇ ಮೂಲಗಳು ಹೇಳುತ್ತಿವೆ.
ಆರೋಪಿಗಳ ಬಗ್ಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಪಿರ್ಯಾದುದಾರರಿಂದ ದೂರು ಪಡೆಯತ್ತಿದ್ದ ಒಬ್ಬರಿಗೆ ಹಾಗೂ ಕಂಟೈನ್ಮೆಂಟ್ ಜೋನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮತ್ತೊಬ್ಬರಿಗೆ ಈ ಸೊಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಇದು ಕೊರೊನಾ ಸಾವಾ…? ಇಂದು ಬೆಳಿಗ್ಗೆ ಶಿವಮೊಗ್ಗ ಕೋವಿಡ್ ಆಸ್ಪತ್ರೆಯಲ್ಲಿ ಸಾವು ಕಂಡ ಸುಮಾರು ಅರವತ್ತು ವರುಷದ ವೃದ್ದೆ ಸಾವಿನ ಸತ್ಯಾಂಶ ತಿಳಿಯಲು ಪರೀಕ್ಷಾ ವರದಿ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ಪರೀಕ್ಷೆ ನಡೆದಿದ್ದು ಫಲಿತಾಂಶ ಇಂದು ಸಂಜೆ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ.

By admin

ನಿಮ್ಮದೊಂದು ಉತ್ತರ

error: Content is protected !!