ದಸರಾ ಪ್ರಯುಕ್ತ ವಿವಿಧೆಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.09ರ ನಾಳೆ ನಡೆಯುವ ಕಾರ್ಯಕ್ರಮಗಳ ವಿವರ ಇಂತಿವೆ.
ರಂಗದಸರಾ: ಸಂಜೆ 5.30 ಕ್ಕೆ ಸುವರ್ಣ ಸಂಸ್ಕøತಿ ಭವನದಲ್ಲಿ ರಂಗಗೀತೆ ಗಾಯನ ಹಾಗೂ “ಮಾತೆ ಮಂಡೋದರಿ” ನಾಟಕ ಪ್ರದರ್ಶನ.


ಪರಿಸರ ದಸರಾ: ಬೆ.11 ಗಂಟೆಗೆ ಬಿ.ಹೆಚ್ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ.
ಕಲಾ ದಸರಾ: ಬೆ.10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಛಾಯಾಚಿತ್ರ ಮತ್ತು ಚಿತ್ರಕಲಾ ಪ್ರದರ್ಶನ.
ಮಕ್ಕಳ ದಸರಾ: ಬೆ.8 ಗಂಟೆಗೆ ಆಯಾ ಕ್ಲಸ್ಟರ್ ನ ಆಯ್ದ ಸ್ಥಳಗಳಲ್ಲಿ ದಸರಾ ನಡಿಗೆ. ಬೆ.10 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಮಕ್ಕಳಿಗೆ ಸಂಬಂಧಪಟ್ಟ ಆಟೋಟ ಕಾರ್ಯಕ್ರಮಗಳು. ಸಂಜೆ 6 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು.
ಆಹಾರ ದಸರಾ: ಮಧ್ಯಾಹ್ನ 3ರಿಂದ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಮಹಿಳಾ ಶಿಕ್ಷಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಗ್ಯಾಸ್ ಒಲೆ ಬಳಸಿ ಅಡುಗೆ ಮಾಡುವ ಸ್ಪರ್ಧೆ.
ಅ.10ರಂದು ನಡೆಯುವ ಕಾರ್ಯಕ್ರಮಗಳು:
ರಂಗದಸರಾ: ಮಧ್ಯಾಹ್ನ 3 ಗಂಟೆಯಿಂದ ಸುವರ್ಣ ಸಂಸ್ಕøತಿ ಭವನದಲ್ಲಿ “ಕಾಲೇಜು ರಂಗ” ಮೂಕಾಭಿನಯ.
ಸಾಂಸ್ಕøತಿಕ ದಸರಾ: ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಮಟ್ಟದ ಚರ್ಮವಾದ್ಯಗಳ ಡೊಳ್ಳು ಮತ್ತು ವೀರಗಾಸೆ ಸ್ಪರ್ಧೆ.
ಪರಿಸರ ದಸರಾ: ಬೆ.7 ಗಂಟೆಗೆ ಫ್ರೀಡಂ ಪಾರ್ಕ್ ಆವರಣದಿಂದ ಸೈಕಲ್ ಜಾಥಾ.


ರೈತ ದಸರಾ: ಬೆ.8 ಗಂಟೆಗೆ ಹರಿಗೆ-ಮಲವಗೊಪ್ಪದಲ್ಲಿ ಕೆಸರುಗದ್ದೆ ಓಟದ ಸ್ಪರ್ಧೆ.
ಕಲಾ ದಸರಾ: ಬೆ.10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ 20 ಕಲಾವಿದರಿಂದ ಸ್ಥಳದಲ್ಲೇ ಚಿತ್ರ ಬಿಡಿಸುವ ಕಾರ್ಯಕ್ರಮ. ಸಂಜೆ 5 ಗಂಟೆಗೆ ಫ್ರೀಡಂ ಪಾರ್ಕ್‍ನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು.
ಯೋಗ ದಸರಾ: ಬೆ.6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ, ಬೆ.8ರಿಂದ ಯೋಗ ನಡಿಗೆ. ಸಂಜೆ 5.30ಕ್ಕೆ ಯೋಗ ಸಂಭ್ರಮ ಕಾರ್ಯಕ್ರಮ.
ಆಹಾರ ದಸರಾ: ಬೆ. 8.30ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಒಂದು ನಿಮಿಷದಲ್ಲಿ ಇಡ್ಲಿ ತಿನ್ನುವ ಹಾಗೂ 9.30 ಕ್ಕೆ ಬಾಳೆಹಣ್ಣು ತಿನ್ನುವ ಸ್ಪರ್ಧೆ. ಅ.10ರಿಂದ 14ರವರೆಗೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿದಿನ ಸಂಜೆ 5 ಗಂಟೆಯಿಂದ ಆಹಾರ ಮೇಳ.
ಅ.11ರಂದು ನಡೆಯುವ ಕಾರ್ಯಕ್ರಮಗಳು:
ರಂಗದಸರಾ: ಸಂಜೆ 5.30ರಿಂದ ಸುವರ್ಣ ಸಂಸ್ಕøತಿ ಭವನದಲ್ಲಿ ರಂಗಗೀತೆಗಳ ಗಾಯನ, ಸಂಜೆ 6.30ರಿಂದ “ತೂರಬೇಡಿ ಗಾಳಿಗೆ” ನಾಟಕ ಪ್ರದರ್ಶನ.

ಯುವದಸರಾ: ಬೆ.9 ಗಂಟೆಯಿಂದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ “ಕರಾಟೆ ಸ್ಪರ್ಧೆ”, ಸಂಜೆ 5 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ದೇಹದಾಢ್ರ್ಯ ಸ್ಪರ್ಧೆ.

By admin

ನಿಮ್ಮದೊಂದು ಉತ್ತರ

error: Content is protected !!