ಶಿವಮೊಗ್ಗ : ಕೇಂದ್ರ ಸರ್ಕಾರದ ವಿರುದ್ದ ಬೆಲೆ ಏರಿಕೆ ಹಾಗೂ ರೈಲ್ವೆ, ಅಂಚೆ, ವಿಮಾನ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನೂ ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಭಾರತೀಯ ಕಿಸಾನ್ ಸಂಯುಕ್ತ ಹೋರಾಟ ಸಮಿತಿ ಕರೆ ನೀಡಿದ್ದ ಭಾರತ್ ಬಂದ್ ಶಿವಮೊಗ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ಯವಾಗಿದೆ.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸು ತ್ತಿರುವುದು ಕಂಡು ಬಂದಿತ್ತು.
ನಗರದಲ್ಲಿ ಸಿಟಿ ಬಸ್, ಆಟೋಗಳ ಸಂಚಾರ ಮಾಮೂಲಿಯಾಗಿತ್ತು ಹಾಗೆಯೇ ಮಕ್ಕಳು ಶಾಲಾ ಕಾಲೇಜುಗಳಿಗೆ ಎಂದಿನಂತೆ ಹೋಗುತ್ತಿರುವ ದೃಶ್ಯಗಳು ಕಂಡುಬಂದವು.
ಬೆಳ್ಳಂಬೆಳಿಗ್ಗೆನೆ ಕನ್ನಡಪರ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಬಸ್ ನಿಲ್ದಾಣದಲ್ಲಿ ಘೋಷಣೆ ಕೂಗಿವೆ.
ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಕರೆಯಲಾಗಿರುವ ಭಾರತ್ ಬಂದ್ ಗೆ ಬೆಳಿಗ್ಗೆಯೇ ಎಲ್ಲವೂ ರಸ್ತೆಗಿಳಿವೆ. ಆಟೋ, ಖಾಸಗಿ ಬಸ್ ಮತ್ತು ಖಾಸಗಿ ಬಸ್ ಗಳು ಎಂದಿನಂತೆ ಓಡಾಡುತ್ತಿವೆ. ಆದರೆ ಎಪಿಎಂಸಿ ತರಕಾರಿ ಮಾರುಕಟ್ಟೆ ಬಂದ್ ಆಗಿವೆ.
ಆದರೆ ಕನ್ನಡಪರ ಸಂಘಗಳು ಕೆಎಸ್ ಆರ್ ಟಿ ಸಿ ಬಸ್ ಗಳನ್ನ ಸಂಚರಿಸಲು ಅಡ್ಡಿಪಡಿಸಲು ಮುಂದಾಗಿವೆ. ಪೊಲೀಸರ ಮಧ್ಯ ಪ್ರವೇಶದಿಂದ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಕೆಎಸ್ ಆರ್ ಟಿ ಸಿ ಬಸ್ ತಡೆಯಲು ಹೋದ ಕನ್ನಡ ಕಾರ್ಮಿಕ ವೇದಿಕೆಯ ವಾಟಾಳ್ ಮಂಜುವನ್ನ ಪೊಲೀಸರ ತಡೆದ ಪರಿಣಾಮ ಅವರು ಬಸ್ ನಿಲ್ದಾಣದ ಮುಂದೆ ಉರುಳು ಸೇವೆ ನಡೆಸಿದರು. ಖಾಸಗಿ ಬಸ್ ನಿಲ್ದಾಣದ ಮುಂಭಾಗಕನ್ನಡ ಪರ ಸಂಘಟನೆಗಳು ಧರಣಿ ಕುಳಿತಿದ್ದವು.

