ಶಿವಮೊಗ್ಗ: ವಿನೋಬನಗರದ ಮೇದಾರಿ ಕೇರಿ ಸಮೀಪ ಯುವಕನೋರ್ವ ಚಾಕು ತೋರಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿ ನಿತೀನ್ (ಭರ್ಜರಿ)ನನ್ನು ವಿನೋಬನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿನೋಬನಗರ ಪೊಲೀಸ್ ಇನ್ಸ್ ಪೆಕ್ಟರ್ ರವಿ ಅವರ ಸಿಬಂದಿಗಳ ತಂಡ ಆರೋಪಿಯನ್ನು ಬಂಧಿಸಿ ಆತನಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ವಿವರ: ನಗರದ ಪಿ&ಟಿ ಕಾಲೋನಿಯ ನಿವಾಸಿಯೊಬ್ಬರು ಹೋಂಡಾ ಆಕ್ಟೀವಾ ಬೈಕ್ ನಲ್ಲಿ ತನ್ನ ಪತ್ನಿಯನ್ನು ಕೂರಿಸಿಕೊಂಡು ವಿನೋಬನಗರದ ಮೇದಾರಕೇರಿ ಹತ್ತಿರ ಹೋಗುವಾಗ ಅಪರಿಚಿತ ವ್ಯಕ್ತಿಯೊಬ್ಬನು ಬಿಳಿ ಬಣ್ಣದ ಹೋಂಡಾ ಆಕ್ಟಿವಾ ಬೈಕ್ ನಲ್ಲಿ ಏಕಾಏಕಿ ಬೈಕ್ ಗೆ ಡಿಕ್ಕಿ ಹೊಡೆಯುವ ರೀತಿ ಬಂದು, ಬೈಕಿನ ಹಿಂಬದಿ ಕುಳಿತಿದ್ದವರ ಕೈಯಲಿದ್ದ ವಿವೊ ಕಂಪನಿಯ ಮೊಬೈಲ್ ಅನ್ನು ಕಿತ್ತುಕೊಂಡು, ಚಾಕು ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದ
ವಿನೋಬನಗರ ಪೊಲೀಸರು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿಯನ್ನು ಪಡೆದು, ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಪತ್ತೆ ಕಾರ್ಯ ತೊಡಗಿದ್ದಾರೆ.
