Davanagere Crime

ಶಿವಮೊಗ್ಗ: ನಗರದ ವಿನೋಬನಗರದಲ್ಲಿ ಬುಧವಾರ ಆರೋಪಿಯೊಬ್ಬ ವಾರಂಟ್‌ಗೆ ಹೆದರಿ ವಿನೋಬನಗರ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ಮಂಜುನಾಥ್ ಅವರನ್ನು ಚರಂಡಿಗೆ ತಳ್ಳಿ  ಗಾಜಿನ ಚೂರುಗಳನ್ನು ನುಂಗಿ ಅಸ್ವಸ್ಥನಾಗಿರುವ ಘಟನೆ ನಡೆದಿದೆ.
ಆರೋಪಿ ರೂಪೇಶ್ (22) ದರೋಡೆ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ನ್ಯಾಯಲಯದ ವಿಚಾರಣೆಗೆ ಸತತ ಗೈರುಹಾಜರಾಗಿದ್ದ.
ನ್ಯಾಯಾಲಯ ಆತನ ವಿರುದ್ಧ ವಾರಂಟ್‌ ಹೊರಡಿಸಿತ್ತು. ಆರೋಪಿ ಶುಭಮಂಗಳ ಸಭಾ ಭವನದ ಬಳಿ ಇರುವ ಮಾಹಿತಿ ಪಡೆದ ಮುಖ್ಯ ಕಾನ್‌ಸ್ಟೆಬಲ್‌ ಮಂಜುನಾಥ್‌ ಅವರು ವಾರಂಟ್‌ ಜಾರಿ ಮಾಡಲು ಮುಂದಾಗಿದ್ದಾರೆ. ಅವರನ್ನು ಚರಂಡಿಗೆ ತಳ್ಳಿದ ಆರೋಪಿ ಬೈಕ್‌ನ ಕನ್ನಡಿ ಒಡೆದು ಚೂರುಗಳನ್ನು ನುಂಗಿದ್ದಾನೆ.
ಚರಂಡಿಯಲ್ಲಿ ಬಿದ್ದ ಕಾನ್‌ಸ್ಟೆಬಲ್‌ ತಲೆಗೆ ಪೆಟ್ಟಾಗಿದೆ. ರೂಪೇಶ್ ಅಸ್ತವ್ಯಸ್ಥಗೊಂಡಿದ್ದಾನೆ. ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ವಿರುದ್ಧ ವಿನೋಬನಗರ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!