Davanagere Crime


ಸೊರಬ: ಮಕ್ಕಳಾಗದಿರುವುದಕ್ಕೆ ಮನನೊಂದು ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ದ್ಯಾವಾಸ ಗ್ರಾಮದಲ್ಲಿ ನಡೆದಿದೆ.


ದ್ಯಾವಾಸ ಗ್ರಾಮದ ಪಲ್ಲವಿ (26) ಆತ್ಮಹತ್ಯೆಗೆ ಶರಣಾದ ದುರ್ಧೈವಿ. ಪಲ್ಲವಿ ಶಿರಸಿ ತಾಲೂಕಿನ ಕಲ್ಲಿ ಗ್ರಾಮದವರಾಗಿದ್ದು, ದ್ಯಾವಸ ಗ್ರಾಮದ ಪ್ರವೀಣ್ ಅವರೊಂದಿಗೆ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು. ವಿವಾಹವಾಗಿ ಎರಡು ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ಕೊರಗಿನಿಂದ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!