ಶಿವಮೊಗ್ಗ, ಜು.15: ಕೊರೊನಾ ತಡೆಗಟ್ಟುವ ದೃಷ್ಟಿಯಿಂದ ಸುಮಾರು ೫೦ ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕ್ಲಬ್ ಹಮ್ಮಿಕೊಂಡಿದೆ ಎಂದು ಲಯನ್ಸ್ ನೂತನ ಅಧ್ಯಕ್ಷ ಕೆ ಕಣ್ಣನ್ ತಿಳಿಸಿದರು.
ಲಯನ್ಸ್ ಕ್ಲಬ್ ಶಿರಾಳಕೊಪ್ಪ ವತಿಯಿಂದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ, ಪಟ್ಟಣ ಪಂಚಾಯಿತಿ, ಆರಕ್ಷಕ ಠಾಣೆ ಕರ್ನಾಟಕ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಮತ್ತು ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ನಲ್ಲಿ ಹತ್ತು Foot operated ಸ್ಯಾನಿಟೈಸರ್ ಡಿಸ್ಪೆನ್ಸರ್ ಸ್ಟ್ಯಾಂಡ್ಗಳು N95 ಮಾಸ್ಕಗಳು, ಫೇಸ್ ಶೀಲ್ಡ್ಗಳು ಇತ್ಯಾದಿ ಸಾಮಗ್ರಿಗಳನ್ನು ಕೊರೊನಾ ವಾರಿಯರ್ಸ್ ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ ನೀಡಲಾಯಿತು.
ಲಯನ್ಸ್ ಕ್ಲಬ್ನ ಕಾರ್ಯದರ್ಶಿ ವೇದಮೂರ್ತಿ, ಖಜಾಂಚಿ ದಯಾನಂದ ರಾಯ್ಕರ್ ಸದಸ್ಯರುಗಳಾದ ಉಮೇಶ್ ಇಸ್ಲೂರ್ ಶಿವಕುಮಾರ್ ರೇಣುಕಯ್ಯ ಶಿವಾಜಿ ಗೌಡ ಮೋಹನ್ ಯೋಗಿರಾಜ್ , ಗಿರೀಶ್ ಮತ್ತು ಸುರೇಶ್ ರವರು ಹಾಜರಿದ್ದರು .