ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರ ಅನುಕೂಲಕ್ಕಾಗಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಶೇಷ ಇ-ಆಸ್ತಿ ಆಂದೋಲನ ಹಾಗೂ ಇ-ಖಾತಾ ಮೇಳಗಳನ್ನು ಆಯೋಜಿಸಲಾಗಿದೆ.
ನಗರ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಆಸ್ತಿ (ಇ-ಖಾತಾ) ಪಡೆಯುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಸುಲಭವಾಗಿ ಇ-ಖಾತಾ ದೊರೆಯುವಂತೆ ಮಾಡಲು ಮಹಾನಗರ ಪಾಲಿಕೆ ಈ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.

ವಿವಿಧ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ
ಆಸ್ತಿ ಮಾಲೀಕರು ಕರ್ನಾಟಕ ಒನ್ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಪಾಲಿಕೆಯ ಮೂರು ವಲಯ ಕಚೇರಿಗಳಲ್ಲಿಯೂ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಇದಲ್ಲದೆ, ಪಾಲಿಕೆಯ Citizen Portal ಮೂಲಕವೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ವೆಬ್ಸೈಟ್ ಮೂಲಕ ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಲು ಅವಕಾಶವಿದೆ.

ನವೆಂಬರ್–ಡಿಸೆಂಬರ್ 2026ರ ಇ-ಆಸ್ತಿ ಮೇಳದ ವೇಳಾಪಟ್ಟಿ
- ನವೆಂಬರ್ 24 – ವಾರ್ಡ್ 1
- ನವೆಂಬರ್ 25 – ವಾರ್ಡ್ 14
- ನವೆಂಬರ್ 26 – ವಾರ್ಡ್ 26
- ಡಿಸೆಂಬರ್ 2 – ವಾರ್ಡ್ 8
- ಡಿಸೆಂಬರ್ 3 – ವಾರ್ಡ್ 20, 21, 22
- ಡಿಸೆಂಬರ್ 5 – ವಾರ್ಡ್ 18, 19
- ಡಿಸೆಂಬರ್ 9 – ವಾರ್ಡ್ 34
- ಡಿಸೆಂಬರ್ 11 – ವಾರ್ಡ್ 10, 11
- ಡಿಸೆಂಬರ್ 16 – ವಾರ್ಡ್ 3, 4, 6, 7
- ಡಿಸೆಂಬರ್ 17 – ವಾರ್ಡ್ 27
- ಡಿಸೆಂಬರ್ 18 – ವಾರ್ಡ್ 30
- ಡಿಸೆಂಬರ್ 22 – ವಾರ್ಡ್ 35
- ಡಿಸೆಂಬರ್ 23 – ವಾರ್ಡ್ 32, 33
- ಡಿಸೆಂಬರ್ 24 – ವಾರ್ಡ್ 16, 17
- ಡಿಸೆಂಬರ್ 29 – ವಾರ್ಡ್ 5, 29
- ಡಿಸೆಂಬರ್ 30 – ವಾರ್ಡ್ 34
- ಡಿಸೆಂಬರ್ 31 – ವಾರ್ಡ್ 28
ಆಸ್ತಿ ಮಾಲೀಕರು ಗಮನಹರಿಸಿ
ನಿಗದಿಪಡಿಸಿರುವ ದಿನಾಂಕಗಳಂದು ತಮ್ಮ ವಾರ್ಡ್ಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆಯುವ ಇ-ಆಸ್ತಿ ಮೇಳದಲ್ಲಿ ಭಾಗವಹಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಪಾಲಿಕೆ ಸೂಚಿಸಿದೆ.
ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನಗರದ ಆಸ್ತಿ ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.