ಶಿವಮೊಗ್ಗ,ನ.೨೩: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಕಳೆದ ೬ ದಿನಗಳಿಂದ ಚಳಿಯನ್ನು ಲೆಕ್ಕಿಸದೆ ಸುಮಾರು ೪೦ ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿಧೀ?ವಧಿ ಮು?ರವನ್ನು ಸರ್ಕಾರ ಕೂಡಲೇ ಗಮನಹರಿಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ತಿಂಗಳಿಗೆ ೧೫ ಸಾವಿರ ರೂ ಗೌರವಧನ ನೀಡಬೇಕು ಸೇರಿದಂತೆ ಒಟ್ಟು ೧೫ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಇಂದಿನ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳು ಗಗನಕ್ಕೇರಿದ್ದು, ಸಿಗುತ್ತಿರುವ ಗೌರವಧನ ಯಾವುದಕ್ಕೂ ಸಾಲದಾಗಿದೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಪರವಾಗಿ ತಮಗೆ ನೀಡಿರುವ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದು, ಕೋರೋನದಂತಹ ಸಂದರ್ಭದಲ್ಲಿ ಸೋಂಕಿಗೆ ಹೆದರದೆ ತಮ್ಮ ಮಕ್ಕಳಿಂದ ಹಾಗೂ ಕುಟುಂಬದವರಿಂದ ದೂರ ಇದ್ದು, ಕೆಲಸ ಮಾಡಿದ್ದು ಬಾಣಂತಿ ಹೆಣ್ಣು ಮಕ್ಕಳು ದುರ್ಗಮ ಸ್ಥಳದಿಂದ ನಗರಗಳಿಗೆ ಬಂದಾಗ ಅವರೊಂದಿಗೆ ಎರಡು ಮೂರು ದಿನಗಳ ಕಾಲ ಅವರೊಟ್ಟಿಗೆ ಇದ್ದು, ಅವರ ಮನೆಯವರಿಗಿಂತ ಹೆಚ್ಚಾಗಿ ಜವಾಬ್ದಾರಿಯಿಂದ ನೋಡಿಕೊಂಡಿದ್ದಾರೆ.
ಕ್ಷಯ ರೋಗ ಇನ್ನಿತರ ಸೋಂಕಿನ ಕಾಯಿಲೆಗಳಿಗೆ ಮನೆ ಮನೆಗೆ ಭೇಟಿ ನೀಡಿ ಚುಚ್ಚು ಮದ್ದು ನೀಡಿದ್ದಾರೆ.

ಸರ್ಕಾರದ ಸವಲತ್ತುಗಳನ್ನು ಮನೆ ಮನೆಗೆ ತಲುಪಿಸಲು ಇವರು ಒಂದು ದೊಡ್ಡ ಮಧ್ಯವರ್ತಿಗಳಾಗಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಕೆಲಸಕ್ಕೆ ತಕ್ಕಂತೆ ವೇತನ ಕೇಳುತ್ತಿರುವುದು ಹಕ್ಕಾಗಿದೆ. ಆದರಿಂದ ಸರ್ಕಾರ ಯಾವುದಾದರೂ ಒಂದು ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಿ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸುತ್ತಿರುವುದು ನ್ಯಾಯ ಸಮ್ಮತವಾಗಿದೆ.

ಇದುವರೆಗೂ ಆಶಾ ಕಾರ್ಯಕರ್ತರಿಗೆ ಎಲ್ಲ ಸರ್ಕಾರಗಳು ಆಶಾಭಾವನೆಯನ್ನು ವ್ಯಕ್ತಪಡಿಸಿ ಭರವಸೆ ನೀಡಿದ್ದಾರೆ ಹೊರತು ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಪಕ್ಕದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾ?ದಲ್ಲಿ ೧೨ ಸಾವಿರಕ್ಕೂ ಹೆಚ್ಚಿನ ವೇತನವನ್ನು ನೀಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ೮ ಸಾವಿರ ಮಾತ್ರ ನೀಡಲಾಗುತ್ತಿದೆ. ಆದರಿಂದ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತರ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ರಾಜ್ಯಾಧ್ಯಕ್ಷ ಎಂ.ರವಿ ಪ್ರಸಾದ್, ಜಿಲ್ಲಾಧ್ಯಕ್ಷ ಎಸ್.ಎಂ.ಮಧುಸೂಧನ್, ಪ್ರಮುಖರಾದ ಅಭಿಜಿತ್, ನೂರುಲ್ಲಾ, ಎಸ್.ಭರತ್, ಲಿಂಗಣ್ಣ, ನಯಾಜ್, ಶಿವು, ರಫೀಕ್, ರಘು, ಪ್ರಧ್ಯುಮ್ನ, ಕಾರ್ತಿಕ್ ಪೂಜಾರಿ, ಲೋಕೇಶ್, ಲಿಂಗರಾಜು, ವರದರಾಜ್, ಅಜಯ್ ಗೌಡ, ರೆಹಮಾನ್, ವೆಂಕಟೇಶ್ ಇದ್ದರು.