

ಶಿವಮೊಗ್ಗ,ನ.03:
ಪ್ರಸ್ತುತ ದೇಶದಲ್ಲಿ ಉತ್ತಮ ಶಾಸಕರ ಅಗತ್ಯವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಆರ್ ಕೆ ಸಿದ್ದರಾಮಣ್ಣ ಅಭಿಪ್ರಾಯಿಸಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಯುವ ಸಂಸತ್ ಸಭೆಯ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ನಿಜವಾಗಿಯೂ ಆಡಳಿತದಲ್ಲಿರುವುದು ಕಾನೂನು ಮಾತ್ರ. ಆಯ್ಕೆಯಾದ ಜನಪ್ರತಿನಿಧಿಗಳು ಬದಲಾಗುತ್ತಿರುತ್ತಾರೆ. ಭಾರತದ ಪ್ರಜಾಪ್ರಭುತ್ವ ಪ್ರಪಂಚದ ಪ್ರಜಾಪ್ರಭುತ್ವಕ್ಕೆ ತಾಯಿಯ ಸ್ಥಾನದಂತಿದೆ. ಪ್ರಜಾಪ್ರಭುತ್ವ ಉಳಿದರೆ ಮಾತ್ರ ದೇಶ ಉತ್ತಮವಾಗಿ ಸಾಗಲು ಸಾಧ್ಯ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಅನಲಾ ಅವರು ಮಾತನಾಡಿ ಶಾಸನಗಳನ್ನು ರೂಪಿಸುವ ಶಾಸನ ಸಭೆಯು ಮಹತ್ವದ್ದಾಗಿದೆ ಎಂದರು .

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ನಿವೃತ್ತ ಉಪನ್ಯಾಸಕ ಘನಶ್ಯಾಮ,ದಿಲೀಪ್ ಕುಮಾರ್ ಪಾಂಡೆ, ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶುಭ ನಿರೂಪಿಸಿದರು, ಹಸನ್ ವಂದಿಸಿದರು.
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ವ್ಯಕ್ತಿ ಆಧಾರಿತ ಸಮೀಕ್ಷೆಗೆ ಮುಖ್ಯಮಂತ್ರಿ ನಿರ್ಧಾರ
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ವ್ಯಕ್ತಿ ಆಧಾರಿತ ಸಮೀಕ್ಷೆ ನಡೆಸುವುದು ಹಾಗೂ ಮನೆ ಮನೆ ಭೇಟಿ ಮಾಡಿ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಗೆ ಸರ್ಕಾರ ಬದ್ಧವಾಗಿದೆ.ಸರ್ವ ಪಕ್ಷ ನಿಯೋಗದೊಂದಿಗೆ ಕೇಂದ್ರ ಸರ್ಕಾರದ ಭೇಟಿ ಮಾಡಲು ತೀರ್ಮಾನಿಸಲಾಗುವುದು ಎಂದು ಸದನದಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.

ಇಂದು ನಗರದ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ತಾಲೂಕು ಮಟ್ಟದ ಯುವ ಸಂಸತ್ ಸಭೆಯಲ್ಲಿ ಶಿವಮೊಗ್ಗ ತಾಲೂಕಿನ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯುವ ನಿಟ್ಟಿನಲ್ಲಿ ಸದನದಲ್ಲಿ ಯಶಸ್ವಿಯಾಗಿ ಚರ್ಚೆಗಳು ನಡೆದವು. ಪ್ರಚಲಿತ ಸಮಸ್ಯೆಗಳನ್ನು ಒಳಗೊಂಡಂತೆ ಹಲವು ಸ್ವಾರಸ್ಯಕರ ವಿಷಯಗಳು ಚರ್ಚೆಗೆ ಒಳಪಟ್ಟವು. ಸದನದ ಮತ್ತೊಂದು ಸ್ವಾರಸ್ಯವೆಂದರೆ ಶಿವಮೊಗ್ಗ ನಗರ ವಿಧಾನಸಭಾ ಸದಸ್ಯರಾದ ಚನ್ನಬಸಪ್ಪನವರು ಹಾಗೂ ವಿಧಾನಪರಿಷತ್ ಸದಸ್ಯರಾದ ಅರುಣ್ ಡಿ ಎಸ್ ಅವರು ಸದನದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರಾಗಿ ಭಾಗವಹಿಸಿ ಸದನದ ಮೆರುಗನ್ನು ಹೆಚ್ಚಿಸಿದರು. ವಿದ್ಯಾರ್ಥಿಗಳಿಗೆ ಸದನದ ಮಹತ್ವ ಶೂನ್ಯವೇಳೆಯ ಮಹತ್ವವನ್ನು ಮನವರಿಕೆ ಮಾಡಿದರು. ಒಟ್ಟಿನಲ್ಲಿ ಇಂದು ನಡೆದ ತಾಲೂಕು ಮಟ್ಟದ ಯುವ ಸಂಸತ್ ಸಭೆಯು ವ್ಯವಸ್ಥಿತವಾಗಿ ನಡೆಯಿತು.
