ಶಿವಮೊಗ್ಗದ ಅತ್ಯಂತ ಪ್ರಮುಖ ವೃತ್ತಗಳಲ್ಲಿ ಒಂದಾದ ಶಿವಮೊಗ್ಗ ಸೀನಪ್ಪ ಶೆಟ್ಟಿ ವೃತ್ತ ಹಿಂದಿದ್ದ ಗೋಪಿ ಎಂಬುವವರ ಹೆಸರಿನಲ್ಲಿ ಕರೆಯುತ್ತಿದ್ದು, ಅದನ್ನು ಇನ್ನು ಮುಂದಾದರೂ ಎಲ್ಲರೂ ಹಾಗೂ ಮಾಧ್ಯಮಗಳು ಸೀನಪ್ಪ ಶೆಟ್ಟಿ ವೃತ್ತ ಎಂದು ನಮೂದಿಸಲು ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ ಟೈಲ್ ಬಳಗ ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆಗೆ ಹಾಗೂ ನಗರದ ಅಭಿವೃದ್ಧಿಗೆ ಸೀನಪ್ಪ ಶೆಟ್ಟಿ ಹಾಗೂ ಅದರಲ್ಲೂ ವಿಶೇಷವಾಗಿ ಶ್ರೀನಿಧಿ ಬಳಗ ಸಾಕಷ್ಟು ಕೊಡುಗೆಗಳನ್ನು ನೀಡಿದೆ.

ಅವರು ಇಂತಹ ಒಂದು ವೃತ್ತ ನಿರ್ಮಾಣವಾಗಲು ಭೂಮಿಯನ್ನು ಸಹ ನೀಡಿದ್ದು, ಇದು ಅಂದು ಅಧಿಕೃತವಾಗಿ ಸೀನಪ್ಪ ಶೆಟ್ಟಿ ವೃತ್ತ ಎಂದು ನಮೂದಾಗಿರುತ್ತದೆ. ಸರ್ಕಾರದ ಎಲ್ಲಾ ದಾಖಲೆಗಳಲ್ಲಿ ಇದರ ಹೆಸರು ಸೀನಪ್ಪ ಶೆಟ್ಟಿ ವೃತ್ತ ಎಂದಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಆಡು ಮಾತಿನ ಗೋಪಿ ವೃತ್ತ ಎಂದು ನಮೂದಿಸಬಾರದು.

ಇನ್ನು ಮುಂದಾದರೂ ಎಲ್ಲರೂ ಇದನ್ನು ಸೀನಪ್ಪ ಶೆಟ್ಟಿ ವೃತ್ತ ಎಂದು ಕರೆಯುವ ಹಾಗೂ ಬರೆಯುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ ಸೀನಪ್ಪ ಶೆಟ್ಟಿ ಅವರ ಉದ್ದೇಶಕ್ಕೆ ಗೌರವಿಸುವ ಅಗತ್ಯವಿದೆ ಅಲ್ಲವೇ?