ಶಿವಮೊಗ್ಗ: ಕೃಷಿಕರು ದನ ಸಾಕುವತ್ತ ಹೆಚ್ಚೆಚ್ಚು ಗಮನಹರಿಸಬೇಕು ಎಂದು ಪ್ರಗತಿಪರ ಕೃಷಿಕ, ರಾಜ್ಯ ಪ್ರಶಸ್ತಿ ವಿಜೇತ ದಯಾನಂದ್ ಕರೆ ನೀಡಿದರು.
ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿದ್ದ ರೈತರ ದಸರಾ -೨೦೨೬ ಉದ್ಘಾಟಿಸಿ ಮಾತನಾಡುತ್ತಿದ್ದರು.


ಶಿವಮೊಗ್ಗ ರೈತ ದಸರಾ ಸಂಭ್ರಮದಲ್ಲಿ ಶಾಸಕ ಚನ್ನಬಸಪ್ಪ ಅವರೊಂದಿಗೆ ಪತ್ರಕರ್ತ ಹಾಗೂ ರೈತ ಎಸ್.ಕೆ. ಗಜೇಂದ್ರಸ್ವಾಮಿ
ರೈತರಲ್ಲಿ ಬಹಳ ವಿಧಗಳಿವೆ. ಎಲ್ಲರೂ ಪ್ರಗತಿಪರ ರೈತರೇ. ಆದರೆ ಸಮಗ್ರ ಕೃಷಿಗೆ ಆದ್ಯತೆ ಕೊಡಬೇಕು. ಆ ನಿಟ್ಟಿನಲ್ಲಿ ನಾನು ಹಸುಗಳನ್ನು ಸಾಕಿದ್ದೇನೆ. ಅಲ್ಲದೇ, ೬೫ ಕೆಜಿ ತೂಗುವ ಬಾಳೆಗೊನೆ ಬೆಳೆದಿದ್ದೆ. ಗಂಜಲು, ಅಜ್ವಾಲ್ ಮೊದಲಾದವುಗಳನ್ನು ಅಭಿವೃದ್ಧಿಪಡಿಸಲು ರೈತರು

ಆಸಕ್ತಿ ತೋರಬೇಕು. ಸ್ವಂತ ಪ್ರಯತ್ನದಿಂದ ನಾನು ಒಂದೇ ಜಾಗದಲ್ಲಿ ಏಳೇಳು ಜಾತಿ ಹುಲ್ಲು, ಜೇನು ಕೃಷಿ, ಉಪ ಬೆಳೆ ಬೆಳೆಯುತ್ತಿದ್ದೇನೆ. ಎಲ್ಲ ರೈತರು ತಮಗಿದ್ದಷ್ಟು ಭೂಮಿಯಲ್ಲಿ ಉಪ ಬೆಳೆಯನ್ನು ಬೆಳೆಯುವದರ ಮೂಲಕ ಆರ್ಥಿಕಾಭಿವೃದ್ಧಿ ಸಾಧಿಸಬೇಕು ಎಂದರು.

ಸಮಗ್ರ ಕೃಷಿಯಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ಬೆಳೆಯೂ ಚೆನ್ನಾಗಿ ಬರುತ್ತೆ. ಸಾವಯವ ಗೊಬ್ಬರ ಉಪಯೋಗಿಸಿ. ಮಿತಿ ಮೀರಿದ ರಾಸಾಯನಿಕ ಗೊಬ್ಬರ ಜಮೀನನ್ನು ಸಂಪೂರ್ಣ ಹಾಳು ಮಾಡುತ್ತದೆ. ಜಾನುವಾರು, ಎರೆಹುಳ ಸಾಕಿ. ಉತ್ತಮ ಬೆಳೆ ಬೆಳೆಯಿರಿ. ಸಾವಯವ ಗೊಬ್ಬರದ? ಪೌಷ್ಟಿಕ ಗೊಬ್ಬರ ಬೇರೊಂದಿಲ್ಲ. ಜೇನು ತುಪ್ಪ ಒಂದು ಕೆ.ಜಿ.ಗೆ ೫ ಸಾವಿರ ರೂ. ವರೆಗೂ ದರ ಇದೆ ಎಂದರು.

ಇನ್ನೋರ್ವ ಕೃಷಿ ಪ್ರಶಸ್ತಿ ವಿಜೇತೆ, ಪ್ರಗತಿಪರ ಕೃಷಿಕರಾದ ಆಶಾರಾಣಿ ಮಾತನಾಡಿ, ದಸರಾ ಎಂದರೆ ಸಾಂಸ್ಕೃತಿಕ ಸಂಕೇತ. ರೈತರಿಗೆ ಪ್ರೇರೇಪಣೆ ನೀಡುವ ಹಬ್ಬ. ವಿದ್ಯಾವಂತನಾದವನು ಕೃಷಿಕನಾಗಿದ್ದೇನೆ ಎಂದು ಬೇಸರದಿಂದ ಹೇಳಿಕೊಳ್ಳಬಾರದು.

ನನ್ನ ಪತಿ ನನಗೆ ಉನ್ನತ ಶಿಕ್ಷಣಕ್ಕೆ ರೀತಿಯ ಸಹಕಾರ, ಮಾರ್ಗದರ್ಶನ ನೀಡಿದರು. ರೈತನಿಗೆ ಏನಾದರೂ ಕಾಯಿಲೆ ಬಂದರೆ ಸುಧಾರಿಸಿಕೊಳ್ಳಲು ೩-೪ ವ? ಬೇಕು. ಕೃಷಿ ಪರಿಣಿತರ ಸಲಹೆ ಪಡೆಯಬೇಕು. ಸಮಗ್ರ ಕೃಷಿ ಪದ್ಧತಿಗೆ ಆದ್ಯತೆ ಕೊಡಬೇಕು ಎಂದರು.

ಕೃಷಿಕರು ತಮ್ಮಲ್ಲಿರುವ ವಸ್ತುಗಳನ್ನು ಯಾವುದನ್ನು ಎಸೆಯಬಾರದು. ಅಡಿಕೆ ಬೆಳೆ ಜೊತೆ ಅಂತರ್ ಬೆಳೆ ಬೆಳೆಯಬೇಕು. ಆ ಮೂಲಕ ಸಮಗ್ರ ಕೃಷಿ ಮಾಡಬೇಕು ಎಂದು ಸಲಹೆ ನೀಡಿದರು.

ನೌಕರಿ ಮಾಡುವವರು ಒಂದು ವ?ದಲ್ಲಿ ದುಡಿಯುವ ಹಣದಷ್ಟನ್ನು ನಾವು ಒಂದು ತಿಂಗಳಲ್ಲಿ ದುಡಿಯುತ್ತೇವೆ. ಇರುವ ಭೂಮಿಯನ್ನೇ ಬಳಸಿ ಉತ್ತಮ ಕೃಷಿ ಮಾಡಿ. ಗ್ರಾಮ ಉದ್ಧಾರವಾಗುತ್ತದೆ. ತಂತ್ರಜ್ಞಾನದ ಸದ್ವಳಕೆ ಮಾಡಿಕೊಳ್ಳಿ. ಆ ಮೂಲಕ ದೇಶ ಪ್ರಗತಿ ಸಾಧಿಸುತ್ತದೆ ಎಂದರು.
ಸಮಾರಂಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಕೆ.ಟಿ. ಗಂಗಾಧರ್, ನಗರದ ಮಹಾದೇವಪ್ಪ, ಹೆಚ್.ಎಂ. ಮಧು, ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.