ಶಿವಮೊಗ್ಗ,ಅ.12: ದೇಶದೆಲ್ಲಡೆ ಎಸ್ಐಆರ್ ಅಕ್ರಮದ ವಿರುದ್ದ ಹೋರಾಟದ ಕಾವು ಹೆಚ್ಚಾಗುತ್ತಿದೆ. ಅದರಂತೆ ಶಿವಮೊಗ್ಗದಲ್ಲೂ ಅದರ ಕಿಚ್ಚು ಹೊತ್ತಿದ್ದು, ಸೋಮವಾರ ನಗರಕ್ಕೆ ಆಗಮಿಸಿ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಇದರ ಬಿಸಿ ತಟ್ಟಿದೆ.

ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ನಗರದ ರೈಲ್ವೆ ಅಭಿವೃದ್ದಿ ಕುರಿತು ಜಿಲ್ಲಾ ಪ್ರವಾಸ ಕೈಗೊಂಡಿರುವ ವಿ.ಸೋಮಣ್ಣ ಅವರು ಬೆಳಿಗ್ಗೆ ಕೆಸ್ಆರ್ಟಿಸಿ ಬಸ್ ನಿಲ್ದಾಣ ಮಾರ್ಗವಾಗಿ ನಗರದೊಳಗೆ ಪ್ರವೇಶಿಸುವ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಅವರ ಕಾರನ್ನು ಅಡ್ಡಗಟ್ಟಿದ್ದಾರೆ.

ಎಸ್ಐಆರ್ ನಲ್ಲಿ ನಡೆದಿರುವ ಅಕ್ರಮ ಮತಗಳ್ಳತನವನ್ನು ಮಾಡಿರುವ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸುವಂತೆ ಆಗ್ರಹಿಸಿ, ಪ್ರತಿಭಟನೆಗೆ ಇಳಿದ್ದಾರೆ.

ಈ ವೇಳೆ ಸ್ಥಳದಲ್ಲಿ ಕೆಲಕ್ಷಣ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಅಲ್ಲಿದ್ದ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಪದಾಧಿಕಾರಿಗಳಾದ ಚರಣ್ ಶೆಟ್ಟಿ, ಗಿರೀಶ್, ಮೊಹಮ್ಮದ್ ಸಕ್ಲೆನ್, ಶಿವರಾಜ್, ಮಲವಗೊಪ್ಪ ಆಕಾಶ್, ಬಾಲಾಜಿ ಶೆಟ್ಟಿ, ನಿಖಿಲ್, ವಿಷ್ಣು ಕುಮಾರ್, ಮಹಮ್ಮದ್ ತೌಸಿಫ್ ಸೇರಿದಂತೆ ಹಲವರು ಇದ್ದಾರೆ