ಶಿವಮೊಗ್ಗ,ಸೆ.29: ಇದುವರೆಗೂ ರಾಜಕಾರಣಕ್ಕಾಗಿ ಬಿಜೆಪಿ ಅನ್ಯಪಕ್ಷಗಳ ಶಾಸಕರನ್ನು ಹಾಗೂ ಸಚಿವರನ್ನು ಕಳ್ಳತನ ಮಾಡುತ್ತಿದ್ದರು. ಆದರೆ ಈಗ ಜನರ ಮತವನ್ನೇ ಕಳ್ಳತನ ಮಾಡಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಮತ ಪರಿಷ್ಕರಣೆ ಸೋಗಿನಲ್ಲಿ ಬಿಜೆಪಿ ಕಾಂಗ್ರೆಸ್ಗೆ ಮತ ಹಾಕುವ ಅಲ್ಪಸಂಖ್ಯಾತರ, ದಲಿತರ ಹಾಗೂ ಹಿಂದುಳಿದ ವರ್ಗಗಳ ಮತವನ್ನು ಕಳ್ಳತನ ಮಾಡುತ್ತಿದೆ ಎಂದು ಆರೋಪಿಸಿದರು.

ಮತ ಪರಿಷ್ಕರಣೆ ಪ್ರತಿ ಹತ್ತು ವರ್ಷಕೊಮ್ಮೆ ನಡೆಯುವ ಪ್ರಕ್ರಿಯೆ, ಆದರೆ ಬಿಜೆಪಿ ಇದನ್ನು ವಿಶೇಷ ಮತ ಪರಿಷ್ಕರಣೆ ಎಂಬ ಹೆಸರಿನಲ್ಲಿ ದುರಪಯೋಗ ಮಾಡಿಕೊಂಡು ಮತವನ್ನು ಕಳ್ಳತನ ಮಾಡುತ್ತಿದೆ. ಇದರಂತೆ ಪಶ್ಚಿಮ ಬಂಗಾಳ, ಹರಿಯಾಣ ಚುನಾವಣೆಯಲ್ಲಿ ಯಾವ ರೀತಿ ಮತ ಕಳ್ಳತವಾಗಿದೆಯೆಂದು ಮತ್ತಷ್ಟು ಬಯಲಾಗಿದೆ. ಇದೇ ರೀತಿ ಕೇರಳದಲ್ಲೂ ಮತಕಳ್ಳತನ ಮಾಡಬೇಕೆಂದು ಮುಂದಾಗಿದ್ದರು, ಆದರೆ ಅದು ಫಲಿಸಲಿಲ್ಲ. ಕರ್ನಾಟಕದಲ್ಲೂ ಅಂತಹ ಸ್ಥಿತಿ ಒದಗಿ ಬರಬಾರದೆಂದು ಕೆಪಿಸಿಸಿ ಅಧ್ಯಕ್ಷರು ಬಿ.ಕೆ.ಹರಿಪ್ರಸಾದ್ ಸ್ಪಷ್ಟವಾದ ನಿಲುವನ್ನು ತೆಗೆದುಕೊಂಡು ಅದರ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ರೂಪಿಸಿದ್ದಾರೆ ಎಂದರು.

ನಮ್ಮ ಪುರ್ವಜನರ ಹಾಗೂ ಪ್ರಜಾಪ್ರಭುತ್ವದ ಮುಖ್ಯ ಉದ್ದೇಶವೇ ಮತದಾನ ಆದರೆ ಅದನ್ನೇ ಇಲ್ಲದಂತೆ ಮಾಡುವ ಸಂಚನ್ನು ಬಿಜೆಪಿ ಮಾಡುತ್ತಿದ್ದು, ಎಸ್ಐಆರ್ ನೆಪದಲ್ಲಿ ಚುನಾವಣಾ ಆಯಕ್ತರನ್ನು ಬಳಸಿಕೊಂಡು ಬಿಜೆಪಿ ತಮಗೆ ಬೇಕಾದವರನ್ನು ಮತಪಟ್ಟಿಯಲ್ಲಿ ಸೇರಿಸುವುದು, ಬೇಡದವರ ಡಿಲಿಟ್ ಮಾಡುವ ಕೆಲಸ ನಡೆಯುತ್ತಿದ್ದಾರೆ.
ಬಿಜೆಪಿ ಪೂರ್ವ ನಿಯೋಜಿತವಾಗಿ ಚುನಾವಣಾ ಆಯುಕ್ತರ ನೇಮಕದ ಕಾನೂನನ್ನು ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವಕ್ಕೆ ದ್ರೋಹವೆಸಗಿದ್ದಾರೆ. ಆ ಮೂಲಕ ಒಂದು ಮತ ಮಾತ್ರ ವಿರೋಧ ಪಕ್ಷದವರೆಗೆ ಕೊಟ್ಟು ಉಳಿದ ಮತ ಆಡಳಿತದವರು ಇಟ್ಟುಕೊಂಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಏನೇ ಅಕ್ರಮ ಮಾಡಿದರು ಯಾವುದೇ ಕ್ರಮ ಕೈಗೊಳ್ಳಬಾರದು ಹಾಗೂ ಯಾವುದೇ ರೀತಿ ಶಿಕ್ಷೆಯಾಗಬಾರದೆಂಬ ನಿಯಮವನ್ನು ತಿದ್ದುಪಡಿಯಲ್ಲಿ ಸೇರಿಸಲಾಗಿದೆ.
ಇದರಿಂದ ಜ್ಞಾನೇಶ್ ಕುಮಾರ್ ಮಾಡಿರುವ ಅಕ್ರಮವನ್ನು ಅವರ ಸಹದ್ಯೋಗಿಗಳೇ ಪ್ರಸ್ತಾಪಿಸಿದರು ಅವರ ವಿರುದ್ದ ಯಾವುದೇ ರೀತಿಯ ಕ್ರಮಕೈಗೊಳ್ಳದೆ ಸುಮ್ಮನಿದ್ದಾರೆ. ಜ್ಞಾನೇಶ್ ಕುಮಾರ್ ಬಿಜೆಪಿ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಆ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ನಿಮಗೆ ಎಂಪಿ ಟಿಕೆಟ್ ಕೊಡುವುದಾಗಿದೆ ಬಿಜೆಪಿ ಹೇಳಿದೆ, ಇದರ ಅರ್ಥವೇನು?. ಅಂದರೆ ಬಿಜೆಪಿ ಅವರಿಗೆ ಪ್ರಜಾಪ್ರಭುತ್ವ ಬೇಡ್ವ? ಇದರ ವಿರುದ್ದ ದೇಶದಲ್ಲಿ ಕಾಂಗ್ರೆಸ್ ಕಾರ್ಯಕ್ರಮವನ್ನು ರೂಪಿಸಲಿದ್ದು, ಅವರು ರಾಜೀನಾಮೆ ಕೊಡುವವರೆಗೂ ಹೋರಾಟವನ್ನು ನಡೆಸಲಾಗುತ್ತದೆ ಎಂದು ಕಿಡಿಕಾರಿದರು.
=
