ಸೊರಬ : ತಾಲೂಕಿನ ಪ್ರಸಿದ್ಧ ಕುಂಬತ್ತಿ ಗ್ರಾಮದ ದುರ್ಗಾಂಬ ದೇವಸ್ಥಾನ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಹುಂಡಿ ಒಡೆದು ಹಣ ಕದಿಯುತ್ತಿದ್ದ ಖದೀಮನನ್ನು ಸೊರಬ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ಗ್ರಾಮದ ನಿವಾಸಿ ರಾಕೇಶ (28 ) ಎಂದು ಗುರುತಿಸಲಾಗಿದ್ದು ಈತನನ್ನು ನ್ಯಾಯಾಲಯದ ಮೂಲಕ ಹಾಜರಪಡಿಸಲಾಗಿದೆ. ಕಳೆದ ಆ. 26 ರಂದು ಸೊರಬದ ಕುಂಬತ್ತಿ ಗ್ರಾಮದ ದುರ್ಗಾಂಬ ದೇವಸ್ಥಾನದಲ್ಲಿ ಕಾಣಿಕೆಹುಂಡಿ ಕಳ್ಳತನವಾಗಿತ್ತು ದೇವಸ್ಥಾನದ ಆಡಳಿತ ಮಂಡಳಿಯವರು ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸ್ ಠಾಣೆಯಲ್ಲಿ ಬಿ. ಎನ್. ಎಸ್ ಕಲo 305(4)ಅಡಿ ( ಸಿ. ಆರ್ ನo : 154/2026) ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ

ಗಳಾದ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖೆ ಮತ್ತು ವಿಚಾರಣೆ ವೇಳೆ ಆರೋಪಿ ರಾಕೇಶ್ ತನ್ನ ಸಹಚರ ನವೀನ್ ಅಲಿಯಾಸ್ ದುರ್ಗಾ ಎಂಬಾತ ನೊಂದಿಗೆ ಸೇರಿ ಹಲವು ಕಡೆ ಕೈಚಳಕ ತೋರಿಸಿರುವುದು ಬೆಳಕಿಗೆ ಬಂದಿದೆ. ಈ ಜೋಡಿ ಸೊರಬದ ಕುಂಬತ್ತಿ ಗ್ರಾಮದ ದುರ್ಗಾಂಬ ದೇವಸ್ಥಾನ ಮತ್ತು ಜಂಬಾನಿ ಮಾರಿಕಾಂಬ ದೇವಸ್ಥಾನ ಹಾಗೂ ಶಿರಳಕೊಪ್ಪದ ಬಸವ ನಂದಿಹಳ್ಳಿ ಚೆನ್ನಬಸವ

ದೇವಸ್ಥಾನಗಳಲ್ಲಿಯು ಹುಂಡಿ ಒಡೆದು ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ನವೀನ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ (ಎಸ್ಪಿ ) ನಿಖಿಲ್. ಬಿ., ಹೆಚ್ಚುವರಿ ಎಸ್ಪಿ ಕಾರಿಯಪ್ಪ ಎ. ಜಿ ಅವರ

ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಶಿಕಾರಿಪುರ ಉಪ ವಿಭಾಗದ ಡಿವೈಎಸ್ಪಿ ಕೇಶವ್ ಮತ್ತು ಸೊರಬ ಸಿ ಪಿ ಐ ಮಹಾಂತೇಶ್ ಲಂಬಿ ಅವರ ಮೇಲ್ವಿಚಾರಣೆಯಲ್ಲಿ ಸೊರಬ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಕುಮಾರ್ ಎಂ.ಎಚ್ ನೇತೃತ್ವದಲ್ಲಿ ರಚಿಸಲಾಗಿದ್ದ ತನಿಖಾ ತಂಡದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ವಿನಯ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.