ಶಿವಮೊಗ್ಗ: ನಗರದ ವಿನೋಬನಗರದ 4ನೇ ತಿರುವಿನಲ್ಲಿ ಶಿವಮೊಗ್ಗ ಸಮೃದ್ಧಿ ಗೆಳೆಯರ ಬಳಗದ ವತಿಯಿಂದ ಈ ಬಾರಿ ವಿಶೇಷವಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಗಣಪತಿ ಮೂರ್ತಿಯ ಹಿಂಭಾಗದಲ್ಲಿ ಭವ್ಯವಾದ ನರಸಿಂಹ ಸ್ವಾಮಿ ಪ್ರತಿಮೆಯನ್ನು ಅಲಂಕರಿಸಲಾಗಿದ್ದು, ವಿಶೇಷ ವಿನ್ಯಾಸ ಹಾಗೂ ಆಕರ್ಷಕ ಪುಷ್ಪಾಲಂಕಾರದಿಂದ ಗಣಪತಿ ಸನ್ನಿಧಿ ಕಂಗೊಳಿಸುತ್ತಿದೆ. ಗಣಪತಿ ಹಾಗೂ ನರಸಿಂಹ ಸ್ವಾಮಿಯ ಅಪರೂಪದ ಸಂಯೋಜನೆ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ.

ಪ್ರತಿಷ್ಠಾಪನೆಯ ಬಳಿಕ ಪ್ರತಿದಿನವೂ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದಾರೆ.

ಅ.2ರಂದು ಅನ್ನಸಂತರ್ಪಣೆ
ಗಣೇಶೋತ್ಸವದ ಅಂಗವಾಗಿ ಅಕ್ಟೋಬರ್ 2ರಂದು ವಿಶೇಷ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಗಣಪತಿ ಹಾಗೂ ನರಸಿಂಹ ಸ್ವಾಮಿಯ ದರ್ಶನ ಪಡೆದು, ಅನ್ನಪ್ರಸಾದ ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಿವಮೊಗ್ಗ ಸಮೃದ್ಧಿ ಗೆಳೆಯರ ಬಳಗದ ವತಿಯಿಂದ ಮನವಿ ಮಾಡಲಾಗಿದೆ.