ಶಿವಮೊಗ್ಗ, ಸೆ.೨೫: ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವದ ಅಂಗವಾಗಿ ಸೆ.೨೫ರಂದು ಸಂಜೆ ೪ ಗಂಟೆಗೆ ನಗರದ ಗೋಪಿ ವೃತ್ತದ ಗಣೇಶ್ ಜ್ಯುವೆಲರ್ಸ್ ಸಮೀಪ ಭಕ್ತರಿಗೆ ೨೦ ಸಾವಿರ ಲಡ್ಡುಗಳನ್ನು ವಿತರಿಸಲು ‘ಸಂಕಲ್ಪ ಶಿವಮೊಗ್ಗ’ ಸಂಘಟನೆ ಸಿದ್ಧತೆ ನಡೆಸಿದೆ.

ಸಂಕಲ್ಪ ಶಿವಮೊಗ್ಗದ ನೇತೃತ್ವದಲ್ಲಿ ೩೬ಕ್ಕೂ ಅಧಿಕ ಸಂಘಟನೆಗಳು ಕೈಜೋಡಿಸಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ನೇತೃತ್ವದಲ್ಲಿ ಲಡ್ಡು ವಿತರಣೆ ಕಾರ್ಯಕ್ರಮ ನಡೆಯಲಿದೆ.

ರಾಜಬೀದಿ ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಪ್ರಸಾದ ರೂಪದಲ್ಲಿ ಲಡ್ಡು ವಿತರಿಸಲಾಗುವುದು. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಿದ್ಧತೆ ಕೈಗೊಂಡಿದ್ದಾರೆ ಎಂದು ಸಿ.ಎಸ್. ಷಡಕ್ಷರಿ ತಿಳಿಸಿದ್ದಾರೆ.