
ಶಿವಮೊಗ್ಗ,ಸೆ.14:
ಈಗಷ್ಟೇ ಅಂದರೆ ದಿನಾಂಕ: 14-09-2026, ಸೋಮವಾರ ಬೆಳಿಗ್ಗೆ 10:30ಕ್ಕೆ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹೊಸತನದ ಕಾರ್ಯಕ್ರಮವೊಂದು ನಡೆಯಲಿದೆ.
ಶಿವಮೊಗ್ಗ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಅವರು, ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್.ಸಿ. ಯೋಗೇಶ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

ಈ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಗಣಪತಿ ಹಬ್ಬದ ಕಾರಣ ಬೆಳಿಗ್ಗೆ 10.30ರಿಂದ 12.00 ಗಂಟೆಗೆ ಮುಕ್ತಾಯ ಆಗಲಿದೆ.
ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ನಾಯಕರು, ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ. .
ವಿಶೇಷ ಸೂಚನೆ : ನೂತನ ಅಧ್ಯಕ್ಷರಿಗೆ ಹಾರ ಮತ್ತು ಶಾಲನ್ನು ಹಾಕಬಾರದಾಗಿ ವಿನಂತಿ. ಇಚ್ಛೆ ಉಳ್ಳವರು ಉತ್ತಮವಾದ ಪುಸ್ತಕ ನೀಡಬಹುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಕಟಣೆ ನೀಡಿದ್ದು ಪುಸ್ತಕ ಪ್ರೇಮಿ ಅಧ್ಯಕ್ಷ ಯೋಗೇಶ್ ಶಾಲು ಹಾರಕ್ಕೆ ಬಾಯ್ ಬಾಯ್ ಹೇಳಿದ್ದು, ಪುಸ್ತಕ ಪ್ರೇಮ ಮೆರೆಯಲಿದ್ದಾರೆ.
