ಶಿವಮೊಗ್ಗ: ರಾಷ್ಟ್ರ ಭಕ್ತ ಬಳಗದ ವತಿಯಿಂದ ಕೆ.ಎಸ್. ಈಶ್ವರಪ್ಪ ಹಾಗೂ ಯುವ ನಾಯಕರಾದ ಕೆ.ಈ. ಕಾಂತೇಶ್ ಅವರ ನೇತೃತ್ವದಲ್ಲಿ ಕಲ್ಲಹಳ್ಳಿ ವಾರ್ಡ್ 04ರ ಬೂತ್ ನಂಬರ್ 63ರ ಶೇಷಾದ್ರಿಪುರಂನಲ್ಲಿ SIR ಬಳಿಕ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಪರಿಶೀಲನಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರ ಭಕ್ತ ಬಳಗದ ಕಾರ್ಯಕರ್ತರು ಮನೆ–ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಧೃಡಪಡಿಸಿದರು. ಮತದಾರರ ಹೆಸರು, ವಿಳಾಸ ಸೇರಿದಂತೆ ಪಟ್ಟಿಯಲ್ಲಿರುವ ವಿವರಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ಮತದಾರರಿಗೆ ನೀಡಲಾಯಿತು.

ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ, ಸೇರ್ಪಡೆ ಅಥವಾ ತಿದ್ದುಪಡಿ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಪ್ರಕ್ರಿಯೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ವಾರ್ಡ್ ಅಧ್ಯಕ್ಷರಾದ ವಿಕಿ, ಪ್ರಧಾನ ಕಾರ್ಯದರ್ಶಿಗಳಾದ ಅಜೇಯ್, ವಿಜಿಯಣ್ಣ, ಪ್ರಕಾಶ್, ಪ್ರಮುಖರಾದ ಸುಂದರಣ್ಣ, ಜಾಥವ್, ಸೆಲ್ವಂ, ರವಿ, ಉಮೇಶ್, ಕಿರಣ್, ದಿನೇಶ್, ಮಹಿಳಾ ಅಧ್ಯಕ್ಷರಾದ ಶೈಲಾ, ಕಾರ್ಯದರ್ಶಿಗಳಾದ ಮಂಜಮ್ಮ, ಗೀತಾ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.